ಮುಲ್ಕಿ: ಶ್ರೀ ಬಪ್ಪನಾಡು ಸೌಹಾರ್ದ ಸಹಕಾರಿ 2019-20ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಶ್ರೀ ಅನ್ನಪೂರ್ಣೇಶ್ವರಿ ಸಭಾಗೃಹದಲ್ಲಿ ಜರುಗಿತು.
ಅಧ್ಯಕ್ಷ ಸಂಪತ್ ಕುಮಾರ್ ಮಾತನಾಡಿ, ಸಂಸ್ಥೆ ವರ್ಷದಲ್ಲಿ ಮುಲ್ಕಿ, ಹಳೆಯಂಗಡಿ ಶಾಖೆ ಒಳಗೊಂಡು ಒಟ್ಟು 1333 ಸದಸ್ಯರಿದ್ದು, 25.65 ಲಕ್ಷ ರೂ. ಪಾಲು ಬಂಡವಾಳದೊಂದಿಗೆ 18.54 ಕೋಟಿ ರೂ. ವ್ಯವಹಾರ ನಡೆಸಿ 4.80 ಕೋಟಿ ರೂ. ಠೇವಣಿ ಸಂಗ್ರಹಿಸಲಾಗಿದೆ. ವರದಿ ವರ್ಷದಲ್ಲಿ ತನ್ನ ಸದಸ್ಯರಿಗೆ ವಿವಿಧ ರೂಪದ ಸಾಲವಾಗಿ 4.59 ಕೋಟಿ ರೂ. ಸಾಲ ನೀಡಲಾಗಿದೆ.
ಆರ್ಥಿಕ ವರ್ಷದಲ್ಲಿ ಸಹಕಾರಿಯು 22.02 ಲಕ್ಷ ರೂ. ಲಾಭ ಗಳಿಸಿದ್ದು ಶೇ.10 ಡಿವಿಡೆಂಡ್ ಘೋಷಣೆ ಮಾಡಲಾಗಿದೆ ಎಂದರು.
ಸಂಸ್ಥೆ ಮುಖ್ಯಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ವಾರ್ಷಿಕ ವರದಿ, ಪರಿಶೋಧಿತ ಲೆಕ್ಕಪತ್ರ ಹಾಗೂ 2020-21ರ ವಾರ್ಷಿಕ ಆಯ-ವ್ಯಯ ಮಂಡಿಸಿದರು. ವರದಿ ವರ್ಷದಲ್ಲಿ ಕ್ರಮಬದ್ಧವಾಗಿ ಉಳಿತಾಯ, ಆಂತರಿಕ ಸಾಲ ನಿರ್ವಹಣೆ, ಬ್ಯಾಂಕ್ ಸಾಲ ಮತ್ತು ಕ್ರಮಬದ್ಧವಾದ ಸಾಲ ಮರುಪಾವತಿಯಲ್ಲಿ ಸಾಧನೆಗೈದ ಸ್ವ-ಸಹಾಯ ಗುಂಪುಗಳಾದ ಶ್ರೀ ದುರ್ಗಾಪರಮೇಶ್ವರಿ ಸ್ವ-ಸಹಾಯ ಸಂಘ-ವನಭೋಜನ, ಮುಲ್ಕಿ ಮತ್ತು ಶ್ರೀ ಶನೀಶ್ವರ ಸ್ವ-ಸಹಾಯ ಸಂಘ- ಕೊಯಿಕುಡೆ ಅವರನ್ನು ಗೌರವಿಸಲಾಯಿತು.
ಕಳೆದ ವರ್ಷದ ಎಸ್ಎಸ್ ಎಲ್ ಸಿ, ಪಿಯುಸಿ ಮತ್ತು ಡಿಗ್ರಿ ಪರೀಕ್ಷೆ ಯಲ್ಲಿ ಶೇ.60ಕ್ಕಿಂತ ಹೆಚ್ಚು ಅಂಕ ಗಳಿಸಿದ ಸದಸ್ಯರ ಮಕ್ಕಳಿಗೆ
ವಿದ್ಯಾರ್ಥಿವೇತನ ನೀಡಿ ಗೌರವಿಸಲಾಯಿತು. ಕೊರೊನಾ ವಾರಿಯರ್ಸ್ ಆಗಿ ಕಾರ್ಯನಿರ್ವಹಿಸಿದ ಸಹಕಾರಿ ಸದಸ್ಯರಾದ ಆಶಾ ಕಾರ್ಯಕರ್ತೆ ಲತಾ ಅವರನ್ನು ಗೌರವಿಸಲಾಯಿತು. ಆಡಳಿತ ಮಂಡಳಿ ಸದಸ್ಯರಾದ ಉಮೇಶ್ ಪಂಜ, ಜಯಾನಂದ ಎ. ರಾವ್, ಕಸ್ತೂರಿ ಪಂಜ, ಸತೀಶ್ ಅಂಚನ್, ರಾಮಚಂದ್ರ ಶೆಣೈ, ರಮಾನಾಥ ಪೈ, ಶ್ಯಾಮ್ ಪ್ರಸಾದ್, ಸುನಿಲ್ ಆಳ್ವ, ಅರುಣ್ ಭಂಡಾರಿ, ಶೈಲೇಶ್ ಕುಮಾರ್, ಶಕುಂತಳಾ ವಿ.ಬಂಗೇರ, ಉಪಸ್ಥಿತರಿದ್ದರು. ಸಹಕಾರಿ ಅಧ್ಯಕ್ಷ ಸಂಪತ್ ಕಾರ್ನಾಡ್ ಸ್ವಾಗತಿಸಿದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ನಿರೂಪಿದರು. ಉಪಾಧ್ಯಕ್ಷ ಉಮೇಶ್ ಪಂಜ ವಂದಿಸಿದರು.
Kshetra Samachara
17/12/2020 08:55 pm