ಮುಲ್ಕಿ: ಮಂಗಳೂರು ನಗರ ಉತ್ತರ ವಿಧಾಸಭಾ ಕ್ಷೇತ್ರದ ತಿರುವೈಲ್ ವಾಮಂಜೂರಿನ ದ.ಕ. ಜಿ.ಪ. ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಮುಖ್ಯದ್ವಾರ ಹಾಗೂ ಶಾಸಕ ಡಾ.ವೈ.ಭರತ್ ಶೆಟ್ಟಿಯವರು ರೋಟರಿ ಕ್ಲಬ್ ಸಹಯೋಗದಲ್ಲಿ ನೀಡಿದ ಈ-ಕ್ಲಾಸ್ ನ ನೂತನ ಉಪಕರಣಗಳ ಉದ್ಘಾಟನೆ ನಡೆಯಿತು.
ಸುಮಾರು ಒಂದು ಲಕ್ಷ ರೂ. ವೆಚ್ಚದಲ್ಲಿ ಶಾಲಾ ಹಳೆ ವಿದ್ಯಾರ್ಥಿ ಸಂಘ, ಜೈ ಶಂಕರ್ ಮಿತ್ರ ಮಂಡಳಿ, ತಿರುವೈಲ್, ವಿದ್ಯಾಬೋಧಿನಿ ಎಜುಕೇಶನ್ ಟ್ರಸ್ಟ್ ಹಾಗೂ ಶಾಲಾಭಿವೃದ್ಧಿ ಸಮಿತಿಯವರು ಜಂಟಿಯಾಗಿ ಕೊಡುಗೆ ನೀಡಿರುವ ಶಾಲಾ ಮುಖ್ಯದ್ವಾರದ ಬಗ್ಗೆ ಶಾಸಕ ಡಾ.ವೈ.ಭರತ್ ಶೆಟ್ಟಿಯವರು ಮೆಚ್ಚುಗೆ ಸೂಚಿಸಿದರು.
ಈ ಸಂದರ್ಭ ಮಳೆ ಹಾನಿ ದುರಸ್ತಿಯಡಿ 14 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಕಾಮಗಾರಿಯನ್ನು ಶಾಸಕರು ಉದ್ಘಾಟಿಸಿದರು. ಕಾರ್ಪೊರೇಟರ್ ಹೇಮಲತಾ ರಘು ಸಾಲ್ಯಾನ್, ಓಂ ಪ್ರಕಾಶ್ ಶೆಟ್ಟಿ, ದಿವಾಕರ ಆಚಾರ್ಯ, ದಯಾನಂದ ಬಂಗೇರ, ಬಿಜೆಪಿ ಮುಖಂಡರಾದ ಜಗದೀಶ್ ಶೇಣವ, ಅನಿಲ್ ಕುಮಾರ್, ರೋಟರಿ ಕ್ಲಬ್ ಅಧ್ಯಕ್ಷರು ಮಂಗಳೂರು ಹಾಗೂ ಲಯನ್ಸ್ ಕ್ಲಬ್ ಕಾವೂರು ಅಧ್ಯಕ್ಷರು, ಶಾಲಾ ಮುಖ್ಯಗುರುಗಳು, ಶಿಕ್ಷಕರು ಮತ್ತಿತರರು ಉಪಸ್ಥಿತರಿದ್ದರು.
Kshetra Samachara
08/11/2020 07:03 pm