ಪುತ್ತೂರು: ಭೌಗೋಳಿಕ ವ್ಯವಸ್ಥೆ ಸೇರಿದಂತೆ ಹಲವು ವೈವಿಧ್ಯತೆ ಹೊಂದಿರುವ ಭಾರತಕ್ಕೆ ಏಕರೂಪ ಶಿಕ್ಷಣ ವ್ಯವಸ್ಥೆ ಕನಸಿನ ಮಾತು ಎಂದು ಬೆಂಗಳೂರಿನ ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್ ಸಂಸ್ಥೆಯ ಕಲಾ ಶಿಕ್ಷಣ ವಿಭಾಗದ ಅಧಿಕಾರಿ ಕೃಷ್ಣಮೂರ್ತಿ ಹೇಳಿದರು.
ರೋಟರಿ ಪುತ್ತೂರು ಎಲೈಟ್ ಹಾಗೂ ಸುದಾನ ವಸತಿಯುತ ಶಾಲೆ ಸಹಯೋಗದಲ್ಲಿ ಸುದಾನ ಎಡ್ವರ್ಡ್ ಸಭಾಂಗಣದಲ್ಲಿ ನಡೆದ ‘ಪ್ರಸ್ತುತ ಸನ್ನಿವೇಶದಲ್ಲಿ ಮಕ್ಕಳು ಮತ್ತು ಶಿಕ್ಷಣ’ ಮಾಹಿತಿ ಸಂವಾದದಲ್ಲಿ ಮಾತನಾಡಿದರು.
ಭಾರತದಲ್ಲಿ ಹವಾಮಾನ, ಮಾತೃಭಾಷೆ ಸಹಿತ ಸ್ಥಳೀಯ ವಿಚಾರಧಾರೆ ಹಲವಿದೆ. ಆದ್ದರಿಂದ ಇವುಗಳಿಗೆ ಪಠ್ಯಕ್ರಮದಲ್ಲಿ ಆದ್ಯತೆ ದೊರೆತಾಗ ಮಾತ್ರ ಶಿಕ್ಷಣ ಕ್ಷೇತ್ರದ ಸುಧಾರಣೆ ಸಾಧ್ಯ ಎಂದರು.
ಐಎಫ್‌ಎ ಗ್ರ್ಯಾಂಟಿ ಸುನಿಲ್ ಸುಳ್ಯ, ರೋಟರಿ ಡಿಸ್ಟ್ರಿಕ್ಟ್ ಸೆಕ್ರೆಟರಿ (ಪ್ರಾಜೆಕ್ಟ್) ಆಸ್ಕರ್ ಆನಂದ್, ಶಿಕ್ಷಕಿ ವಿನುತಾ , ಈಶ್ವರ್ ಬೆಡೆಕರ್, ರಂಜಿತ್ ಮಥಾಯಸ್, ಲವೀನಾ ಹನ್ಸ್ ಐಎಫ್‌ಎ ಗ್ರ್ಯಾಂಟಿ ಮೌನೇಶ ವಿಶ್ವಕರ್ಮ ಮೊದಲಾದವರು ಉಪಸ್ಥಿತರಿದ್ದರು.
Kshetra Samachara
26/10/2020 10:24 pm