ಮುಲ್ಕಿ: ಅತಿಕಾರಿಬೆಟ್ಟು ಗ್ರಾಪಂ ಮೈಲೋಟ್ಟು ಸಮಾಜ ಮಂದಿರದಲ್ಲಿ ಅತಿಕಾರಿಬೆಟ್ಟುಸಮೃದ್ಧಿ ಸಂಜೀವಿನಿ ಒಕ್ಕೂಟ ಪದಾಧಿಕಾರಿಗಳ ಪ್ರಥಮ ಸಭೆ ನಡೆಯಿತು.
ಈ ಸಂದರ್ಭ ಸಂಜೀವಿನಿ ಒಕ್ಕೂಟ ಅಧ್ಯಕ್ಷರಾದ ಶಾರದಾ ವಸಂತ ಮಾತನಾಡಿ, ಮಹಿಳೆಯರ ಸಬಲೀಕರಣಕ್ಕಾಗಿ ಸಂಘ ರಚಿಸಿ ಮಹಿಳೆಯರನ್ನು ಮುಖ್ಯವಾಹಿನಿಗೆ ಕರೆ ತರುವುದರ ಮೂಲಕ ಸಮಾಜದಲ್ಲಿ ಮಹಿಳೆಯರಿಗೆ ಆಗುವ ಅನ್ಯಾಯ- ದೌರ್ಜನ್ಯ ಕ್ಕೆ ಕಡಿವಾಣ ಹಾಗೂ ಮಹಿಳೆಯರಿಗೆ ವಿಶೇಷ ಸ್ಥಾನಮಾನ ದೊರಕಿಸಲು ಒಕ್ಕೂಟ ಬಲಪಡಿಸುವ ಅಗತ್ಯವಿದೆ ಎಂದರು.
ಸಂಜೀವಿನಿ ಕಾರ್ಯಕ್ರಮ ಜಿಲ್ಲಾ ಸಂಯೋಜಕ ಹರಿಪ್ರಸಾದ್ , ಅತಿಕಾರಿ ಬೆಟ್ಟು ಗ್ರಾ ಪಂ ಪಿಡಿಒ ರವಿ , ಒಕ್ಕೂಟ ಪದಾಧಿಕಾರಿಗಳು, ಮುಖ್ಯ ಪುಸ್ತಕ ಬರಹಗಾರರಾದ ಸುಷ್ಮಾ ಭಾಗವಹಿಸಿದ್ದರು.ಸಂಜೀವಿನಿ ಕಾರ್ಯಕ್ರಮ ದ ಜಿಲ್ಲಾ ಸಂಯೋಜಕ ಹರಿಪ್ರಸಾದ್ ಮುಂದಿನ ದಿನಗಳಲ್ಲಿ ಒಕ್ಕೂಟ ದ ಕಾರ್ಯನಿರ್ವಹಣೆ ಬಗ್ಗೆ ಮಾರ್ಗದರ್ಶನ ನೀಡಿದರು.
ಪಿಡಿಒ ರವಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಯಡಿ ಸೋಕ್ ಫಿಟ್ ಮತ್ತು ಪೌಷ್ಟಿಕ ಕೈತೋಟ ಬಗ್ಗೆ ಮಾಹಿತಿ ನೀಡಿದರು.
ಒಕ್ಕೂಟದಡಿ ಮಹಿಳಾ ಸ್ವಾವಲಂಬಿ ಚಟುವಟಿಕೆ ಕೈಗೊಳ್ಳುವುದು, ಮಾಸಿಕ ಸ್ವಚ್ಛತಾ ಶ್ರಮದಾನ ಹಾಗೂ ನರೇಗಾ ಯೋಜನೆಯಡಿ ಸೋಕ್ ಫಿಟ್, ಪೌಷ್ಟಿಕ ಕೈತೋಟ ನಿರ್ಮಿಸುವ ಬಗ್ಗೆ ಚರ್ಚಿಸಲಾಯಿತು.
Kshetra Samachara
23/10/2020 03:26 pm