ಸುಳ್ಯ: ಕೊರೊನಾ ಪಾಡು ಎಲ್ಲ ವಯೋಮಾನದವರಿಗೂ ಒಂದಿಲ್ಲೊಂದು ತೊಂದರೆ ನೀಡುತ್ತಲೇ ಬಂದಿದೆ.
ಇದಕ್ಕೆ ಮಕ್ಕಳು,ವಿದ್ಯಾರ್ಥಿಗಳು ಹೊರತ್ತಲ್ಲ. ಸದ್ಯ ಡೆಡ್ಲಿ ಸೋಂಕಿನಿಂದಾಗಿ ಶಾಲಾ ಕಾಲೇಜುಗಳನ್ನು ಬಂದ ಮಾಡಿದ ಸರ್ಕಾರ ಆನ್ ಲೈನ್ ಶಿಕ್ಷಣಕ್ಕೆ ಮೊರೆ ಹೋಗಿದೆ.
ಹೀಗೆ ಆನ್ ಲೈನ್ ಶಿಕ್ಷಣ ಪಡೆಯಲು ಎಲ್ಲ ವಿದ್ಯಾರ್ಥಿಗಳು ಸಾಧ್ಯವಾಗುತ್ತಿಲ್ಲ. ಅದರಲ್ಲೂ ಹಲವು ವಿದ್ಯಾರ್ಥಿಗಳು ನೆಟ್ ವರ್ಕ್ ಸಮಸ್ಯೆಯಿಂದಾಗಿ ಪರದಾಡುವಂತಾಗಿದೆ.
ಸುಳ್ಯದ ಬಾಳುಗೋಡು ಎಂಬ ಗ್ರಾಮದಲ್ಲಿ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ನೆಟ್ ವರ್ಕ್ ಸಮಸ್ಯೆಯಿಂದಾಗಿ ಹತ್ತಿರದ ಗುಡ್ಡಗಾಡುಗಳಿಗೆ ಹೋಗಿ, ಮರವನ್ನೇರಿ ಆನ್ ಲೈನ್ ತರಗತಿಗಳಿಗೆ ಹಾಜರಾಗಬೇಕಾದ ಪರಿಸ್ಥಿತಿ ಎದುರಾಗಿದೆ.
ಇನ್ನೂ ಮಕ್ಕಳು ಬೆಟ್ಟುಮಕ್ಕಿ ಪ್ರದೇಶದಲ್ಲಿ ಟೆಂಟ್ ಹಾಕಿದ್ದಾರೆ. ಮರಗಳನ್ನು ಏರುತ್ತಾರೆ. ಬಾಳುಗೋಡು ಪುಷ್ಪಗಿರಿ ಬೆಟ್ಟದ ಬುಡದಲ್ಲಿರುವ ಒಂದು ಹಳ್ಳಿಯಾಗಿದ್ದು, ಕಾಡು ಆನೆಗಳು, ಚಿರತೆಗಳು ಮತ್ತು ಇತರ ಕಾಡು ಪ್ರಾಣಿಗಳು ಆಗಾಗ್ಗೆ ತಿರುಗಾಡುತ್ತದೆ.
ಹೀಗಾಗಿ ಈ ಗ್ರಾಮದವರು ತಮ್ಮ ಮಕ್ಕಳು ಈ ಗುಡ್ಡ ಪ್ರದೇಶದಲ್ಲಿ ಆನ್ ಲೈನ್ ತರಗತಿಗೆ ಹಾಜರಾಗವುದರಿಂದ ಆತಂಕಕ್ಕೆ ಒಳಗಾಗಿದ್ದಾರೆ.
ಈ ಸಮಸ್ಯೆ ಕುರಿತು ಗ್ರಾಮಸ್ಥರು ಪ್ರಧಾನ ಮಂತ್ರಿಗೆ ಪತ್ರ ಬರೆದಿದ್ದಾರೆ. ಆದರೆ ಈವರೆಗೂ ಯಾವುದೇ ಪ್ರಯೋಜನವಾಗಿಲ್ಲ.
Kshetra Samachara
08/10/2020 03:44 pm