ಕಟೀಲು: ಸಮಾಜದ ಕಟ್ಟ ಕಡೆಯ ಬಡ ವರ್ಗದವರಿಗೂ ಕಲಿಯುವ ಅವಕಾಶ ದೊರೆಯಬೇಕು ಎಂಬ ಉದ್ದೇಶದಿಂದ ಕಟೀಲು ಪ್ರತಿಷ್ಠಾನವನ್ನು ಪ್ರಾರಂಭಿಸಿ ಕಾರ್ಯಪ್ರವರ್ತರಾಗಿರುವುದು ಅಭಿನಂದನೀಯ ಎಂದು ಮೂಲ್ಕಿ ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಅವರು ಕಟೀಲು ದೇವಳದ ಸರಸ್ವತಿ ಸದನದಲ್ಲಿ ಶ್ರೀ ಕಟೀಲು ಪ್ರತಿಷ್ಠಾನ (ರಿ.) ಇದರ ಭರತನಾಟ್ಯ, ಸಂಗೀತ, ನಾಟಕ ಸಂಭ್ರಮೋತ್ಸವ, ಸನ್ಮಾನ, ಗುರುವಂದನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಉದ್ಯಮಿ ಶಶಿಧರ್ ಶೆಟ್ಟಿ ಬರೋಡ ಮಾತನಾಡಿದರು ಹೇಳಿದರು. ಎ.ಸಿ.ಡಿ.ಸಿ.ಸಿ ಬ್ಯಾಂಕ್ ನ ಅಧ್ಯಕ್ಷ ಡಾ. ಎಂ.ಎಸ್.ರಾಜೇಂದ್ರಕುಮಾರ್ ಅವರನ್ನು ಪ್ರತಿಷ್ಠಾನದ ವತಿಯಿಂದ ಗೌರವಿಸಲಾಯಿತು. ಕಟೀಲು ದೇಗುಲದ ಮುಕ್ತೇಸರ ವಾಸುದೇವ ಆಸ್ರಣ್ಣ ಆಶೀರ್ವಾಚನ ನೀಡಿದರು.ಈ ಸಂದರ್ಭ ಕಟೀಲು ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ, ಮೊಕ್ತೇಸರ ಸನತ್‌ಕುಮಾರ್ ಶೆಟ್ಟಿ ಕೊಡೆತ್ತೂರುಗುತ್ತು, ಉಪ್ಪಳ
ನಿತ್ಯಾನಂದ ಯೋಗಾಶ್ರಮದ ವಿಶ್ವಸ್ಥರಾದ ಶಶಿಧರ ಶೆಟ್ಟಿ,ಹರಿನಾರಾಯಣದಾಸ ಆಸ್ರಣ್ಣ, ಕಮಲಾದೇವಿಪ್ರಸಾದ ಆಸ್ತಣ್ಣ, ಬಿಪಿನ್ ಚಂದ್ರ ಶೆಟ್ಟಿ, ಕೊಡೆತ್ತೂರುಗುತ್ತು, ಉದ್ಯಮಿ ಗಿರೀಶ್ ಶೆಟ್ಟಿ ಕಟೀಲು, ಉದ್ಯಮಿ ಸೌಂದರ್ಯ ರಮೇಶ್, ಶಶಿಕುಮಾರ್ ರೈ,, ಸಿ.ಎ ಸುದೇಶ್ ಕುಮಾರ್ ರೈ, ಪ್ರತಿಷ್ಠಾನದ ಅಧ್ಯಕ್ಷ ಅನಂತಪದ್ಮನಾಭ ಆಸ್ರಣ್ಣ ಮಧುಕರ ಅಮೀನ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
09/10/2022 07:26 pm