ಮುಲ್ಕಿ: ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ವಿದೂಷಿ ಪವನ ಬಿ ಆಚಾರ್ ರವರಿಂದ ವೀಣಾ ವಾದನ ನಡೆಯಿತು. ಬಳಿಕ ಬೆಂಜನ ಪದವು ಶ್ರೀ ದುರ್ಗಾ ಮೃತ್ಯುಂಜಲಿ ಚಾರಿಟೇಬಲ್ ಟ್ರಸ್ಟ್ (ರಿ) ವತಿಯಿಂದ ಪೆರ್ಮಂಕಿ ಸುರೇಶ್ ಕಾರಂತ್ ರವರ ಶಿಷ್ಯೆ ರಿಂದ ಭರತನಾಟ್ಯ ನೃತ್ಯ ವೈಭವ ನಡೆಯಿತು.
ಈ ಸಂದರ್ಭ ದೇವಸ್ಥಾನದ ಅನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತರು, ಆಡಳಿತ ಮೊಕ್ತೇಸರ ಮನೋಹರ ಶೆಟ್ಟಿ, ನಾಗೇಶ್ ಬಪ್ಪನಾಡು, ಅಕೌಂಟೆಂಟ್ ಶಿವಶಂಕರ್ ಮತ್ತಿತರರು ಉಪಸ್ಥಿತರಿದ್ದರು.ಲಕ್ಷ್ಮಿಕಾಂತ್ ರಾವ್ ನಿರೂಪಿಸಿದರು.
Kshetra Samachara
05/10/2022 07:36 pm