ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟೀಲು: ವಿಜೃಂಭಣೆಯ ಶಾರದಾ ಪೂಜೆ

ಕಟೀಲು: ಶ್ರೀ ದುರ್ಗಾಪರಮೇಶ್ವರೀ ದೇಗುಲದ ವಿದ್ಯಾಲಯದಲ್ಲಿರುವ ಶತಮಾನ ದಾಟಿರುವ ಶಾರದೆಯ ಮೂರ್ತಿಗೆ ವಿದ್ಯಾರ್ಥಿಗಳ ಸಮ್ಮುಖ ಶಾರದಾ ಪೂಜೆ ನಡೆಯಿತು.

ಸರಸ್ವತೀ ಸದನವೆಂಬ ಹೆಸರಿನ ಶಾರದಾ ಮೂರ್ತಿಯ ಮುಂದೆ ಪ್ರತಿ ಶುಕ್ರವಾರ ಶಾಲೆಯ ಮಕ್ಕಳೆಲ್ಲ ಭಜನೆ ಹೇಳುವುದು ವರ್ಷಂಪ್ರತಿ ಶಾರದಾ ಪೂಜೆಯನ್ನು ವಿಜೃಂಭಣೆಯಿಂದ ನಡೆಸುವುದು ದಶಕಗಳಿಂದ ನಡೆದಿದೆ. ಶಾಲೆಗೆ ನೂರ ಆರು ವರ್ಷ. ಶಾಲೆಯ ಕಟ್ಟಡ ಹೊಸತಾಗಿದೆ. ಸರಸ್ವತಿಯ ಮೂರ್ತಿ ಅಕ್ಷರಾನ್ನಂ ಎಂಬ ವಿದ್ಯಾರ್ಥಿಗಳ ಊಟದ ಮನೆಗೆ ಸ್ಥಳಾಂತರಗೊಂಡಿದೆ. ಪ್ರತಿ ಶುಕ್ರವಾರ ವಿದ್ಯಾರ್ಥಿಗಳಿಂದ ಭಜನೆ ನಡೆಯುತ್ತಿದೆ. ಮೂಲಾನಕ್ಷತ್ರದ ಭಾನುವಾರ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿಗಳು ಭಾನುವಾರ ಭಜನೆ ಹಾಡಿದರು.

ಅರ್ಚಕ ಶ್ರೀಕರ ಆಸ್ರಣ್ಣ ಪೂಜೆ ಮಾಡಿದರು. ಮಕ್ಕಳಿಗೆಲ್ಲ ಪಂಚಕಜ್ಜಾಯ ಪ್ರಸಾದ ವಿತರಿಸಲಾಯಿತು.ದೇಗುಲದ ಆಡಳಿತ ಮಂಡಳಿಯ ಸನತ್ ಕುಮಾರ ಶೆಟ್ಟಿ, ಮೋಹನ್ ರಾವ್,  ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ಸೋಮಪ್ಪ ಅಲಂಗಾರು ಸರೋಜಿನಿ ಚಂದ್ರಶೇಖರ ಭಟ್ ಮತ್ತಿತರರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

02/10/2022 08:12 pm

Cinque Terre

1.14 K

Cinque Terre

0

ಸಂಬಂಧಿತ ಸುದ್ದಿ