ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಪ್ಪನಾಡು: ಸಾಮೂಹಿಕ ಯೋಗ ದುರ್ಗಾ ನಮಸ್ಕಾರ ಹಾಗೂ ಮಹಾಲಕ್ಷ್ಮ್ಯಷ್ಟಕಂ ಸ್ತೋತ್ರ ಪಠಣ ಕಾರ್ಯಕ್ರಮ

ಮುಲ್ಕಿ: ಇಲ್ಲಿಗೆ ಸಮೀಪದ ಬಪ್ಪನಾಡು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ

ಎಸ್. ಪಿ. ವೈ. ಎಸ್. ಎಸ್. ಯೋಗ ಸಮಿತಿಯಿಂದ ಸಾಮೂಹಿಕ ಯೋಗದುರ್ಗಾ ನಮಸ್ಕಾರ ಹಾಗೂ ಮಹಾಲಕ್ಷ್ಮ್ಯಷ್ಟಕಂ ಸ್ತೋತ್ರ ಪಠಣ ಹಾಗೂ ಅರ್ಚನೆ ಕಾರ್ಯಕ್ರಮ ನಡೆಯಿತು.

ಕ್ಷೇತ್ರದ ಆಡಳಿತ ಮೊಕ್ತೇಸರ ಮನೋಹರ ಶೆಟ್ಟಿ , ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಸುನೀಲ್ ಆಳ್ವ , ಎಸ್.ಪಿ.ವೈ.ಎಸ್.ಎಸ್ ಜಿಲ್ಲಾ ಸಂಚಾಲಕರಾದ ಜಯರಾಮ, ಪ್ರಾಂತ ಸಂಚಾಲಕರಾದ ರವೀಶ್ ಕುಮಾರ್ ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ಯೋಗ ದುರ್ಗಾ ನಮಸ್ಕಾರ ಹಾಗೂ ಮಹಾಲಕ್ಷ್ಮ್ಯಷ್ಟಕಂ ಸ್ತೋತ್ರ ಪಠಣದ ಮಾಹಿತಿಯನ್ನು ಪೊಳಲಿ ನಗರ ಸಂಚಾಲಕರಾದ ರೇಖಾ ಸತೀಶ್ ತಿಳಿಸಿದರು.

3 ಹಂತದಲ್ಲಿ 9 ಸುತ್ತು ಯೋಗ ದುರ್ಗಾನಮಸ್ಕಾರವು ಶಿಕ್ಷಣ ಪ್ರಮುಖರಾದ ಹರೀಶ್ ಅಂಚನ್ ಸುರತ್ಕಲ್ , ಗಣೇಶ ಸುವರ್ಣ ನೇತೃತ್ವದಲ್ಲಿ ನಡೆಯಿತು. ಮಂಗಳೂರು ಪುತ್ತೂರು, ಬಂಟ್ವಾಳ ತಾಲೂಕುಗಳಿಂದ ಮಂಜೇಶ್ವರ,ಪೊಳಲಿ,ಉಳ್ಳಾಲ,ಕಲ್ಲಡ್ಕದಿಂದ ಎರಡು ಸಾವಿರದ ಮುನ್ನೂರಕ್ಕೂ ಹೆಚ್ಚಿನ ಯೋಗಪಟುಗಳು ಸಾರ್ವಜನಿಕರೊಂದಿಗೆ ಭಕ್ತಿಭಾವದಿಂದ ದೇವಾಲಯದ ಸುತ್ತಲೂ ಹಾಗೂ ರಾಜಗೋಪುರದ ಮುಂಬಾಗದಲ್ಲಿ ಯೋಗ ನಮಸ್ಕಾರ ಮಾಡಿ ಸ್ತೋತ್ರ ಪಠಿಸಿದರು.

ಪ್ರಾಂತ ಸಂಚಾಲಕರಾದ ಹರೀಶ್ ಕೋಟ್ಯಾನ್ , ಪ್ರಾಂತ ಪ್ರತಿನಿಧಿ ಶಿವಾನಂದ ರೈ, ವಲಯ ಸಂಯೋಜಕರಾದ ಅಶೋಕ ಕುಮಾರ್ ಜೈನ್, ವಲಯ ಸಂಚಾಲಕರಾದ ಗೋಕುಲ್ ನಾಥ್ ಶೆಣೈ , ಮಾರ್ಗದರ್ಶನ ನೀಡಿದರು.

Edited By : PublicNext Desk
Kshetra Samachara

Kshetra Samachara

02/10/2022 04:23 pm

Cinque Terre

666

Cinque Terre

0

ಸಂಬಂಧಿತ ಸುದ್ದಿ