ಕಟೀಲು: ಇತಿಹಾಸ ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಪ್ರಯುಕ್ತ ಲಲಿತಾ ಪಂಚಮಿ ವಿಜೃಂಣೆಯಿಂದ ನಡೆಯಿತು.ಕ್ಷೇತ್ರದ ಅರ್ಚಕರು ಶೇಷ ವಸ್ತ್ರವನ್ನು ಭಕ್ತರಿಗೆ ಸಮರ್ಪಿಸಿದರು.
ಆಡಳಿತ ಮಂಡಳಿ ಅಧ್ಯಕ್ಷ ಸನತ್ ಕುಮಾರ ಶೆಟ್ಟಿ, ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ಶ್ರೀಹರಿನಾರಾಯಣ ಅಸ್ರಣ್ಣ, ಬಿಪಿನ್ ಚಂದ್ರ ಶೆಟ್ಟಿ, ಮೋಹನ್ ರಾವ್ ಮುಂತಾದವರಿದ್ದರು.
ಕಟೀಲಿನಲ್ಲಿ ಇಷ್ಟಾರ್ಥ ಸಿದ್ದಿಗೆ ಸೀರೆಯನ್ನು ಹರಕೆ ರೀತಿಯಲ್ಲಿ ಭಕ್ತರು ಸಲ್ಲಿಸುತ್ತಿದ್ದು ವಾರ್ಷಿಕ ಮೂವತ್ತೈದರಿಂದ ನಲವತ್ತು ಸಾವಿರ ಸೀರೆಗಳು ದೇಗುಲಕ್ಕೆ ಸಲ್ಲಿಕೆಯಾಗುತ್ತಿದೆ. ಹೀಗೆ ಬಂದ ಸೀರೆಯನ್ನು ದೇವರಿಗೆ ಸಮರ್ಪಿಸಿದ ಬಳಿಕ ಶೇಷವಸ್ತ್ರವಾಗಿ ಭಕ್ತರಿಗೆ ನೀಡಲಾಗುತ್ತಿದೆ. ರೂ. 2000ಕ್ಕಿಂತ ಹೆಚ್ಚಿನ ಮೌಲ್ಯವನ್ನು ಅನ್ನದಾನ, ವಿದ್ಯಾದಾನ. ಗೋದಾನ. ರಂಗಪೂಜೆ ಮುಂತಾದ ಸೇವೆಗಳಿಗೆ ನೀಡುವ ಎಲ್ಲ ಭಕ್ತರಿಗೂ ಶೇಷವಸ್ತ್ರವನ್ನು ಭಕ್ತರಿಗೆ ನೀಡಲಾಗುತ್ತಿದ್ದು ಗಣ್ಯರಿಗೆ ಯಕ್ಷಗಾನ ಮೇಳದ ವೇಷಗಳಿಗೂ ನೀಡಲಾಗುತ್ತಿದೆ. ಅಲ್ಲದೆ ಭಕ್ತರಿಗೆ ಸೀರೆ ದರದ ಇಪ್ಪತ್ತೈದು ಶೇಕಡಾ ರಿಯಾಯಿತಿ ದರದಲ್ಲಿ ಭಕ್ತರಿಗೆ ಶೇಷವಸ್ತ್ರವನ್ನು ಪಡೆಯುವ ಅವಕಾಶ ಇದ್ದು ಇದರಿಂದ ಕಳೆದ ವರುಷ ಕಟೀಲು ದೇಗುಲಕ್ಕೆ ಸುಮಾರು 60 ಲಕ್ಷ ರೂ. ಆದಾಯ ಬಂದಿದೆ.
ನವರಾತ್ರಿಯ ಲಲಿತಾ ಪಂಚಮಿಯಂದು ರಾತ್ರಿ ಅನ್ನಪ್ರಸಾದ ಸ್ವೀಕರಿಸುವ ಹೆಣ್ಮಕ್ಕಳಿಗೆ ಮಹಿಳಾ ಭಕ್ತರಿಗೆ ಪ್ರಸಾದ ರೂಪವಾಗಿ ನೀಡಲಾಗುತ್ತಿದೆ. ಕಳೆದ ಎರಡು ವರುಷಗಳಲ್ಲಿ ಕೊರೊನ ಕಾರಣಕ್ಕಾಗಿ ನೀಡಲಾಗಿರಲಿಲ್ಲ.
ಶುಕ್ರವಾರದಂದು ಸಂಜೆ 6 ಗಂಟೆಗೇ ಅನ್ನ ಪ್ರಸಾದ ಆರಂಭವಾಗಿದ್ದು ಸಹಸ್ರಾರು ಭಕ್ತರಿಗೆ ಶೇಷವಸ್ತ್ರ ನೀಡಲಾಯಿತು. ಕಟೀಲಿನ ಶಾಲಾ ಸಿಬಂದಿಗಳು ವಿದ್ಯಾರ್ಥಿಗಳು ಹಾಗೂ ಭಕ್ತರು ಅನ್ನಪ್ರಸಾದ ಹಾಗೂ ಕ್ಯೂ ವ್ಯವಸ್ಥೆಯಲ್ಲಿ ಸ್ವಯಂಸೇವಕರಾಗಿ ಶ್ರಮಿಸಿದರು.
Kshetra Samachara
30/09/2022 07:03 pm