ಮುಲ್ಕಿ: ಇತಿಹಾಸ ಪ್ರಸಿದ್ಧ ಮುಲ್ಕಿ ಸೀಮೆಯ ಒಂಬತ್ತು ಮಾಗಣೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವ ಪ್ರಯುಕ್ತ ಮಂಗಳೂರಿನ ಮಾರ್ನಮಿ ಕಟ್ಟೆ ಗಾನಶ್ರೀ ಸಂಗೀತ ವಿದ್ಯಾಲಯ ಹಾಗೂ ಶಿಷ್ಯ ವೃಂದವರಿಂದ ಭಕ್ತಿ ಗಾನ ವೈಭವ ಮತ್ತು ವಿದ್ವಾನ್ ಗಣಪತಿ ಭಟ್ ಎಲ್ಲಾಪುರ, ಶ್ರೀಪತಿ ಉಪಾಧ್ಯಾಯ ಹಾಗೂ ಬಳಗದವರಿಂದ "ಗಾನ ಆಖ್ಯಾನ"ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.
ಈ ಸಂದರ್ಭ ಶರತ್ ಎನ್ ಸಾಲ್ಯಾನ್ ಕಾರ್ನಾಡ್, ಆಡಳಿತ ಮೊಕ್ತೇಸರ ಮನೋಹರ ಶೆಟ್ಟಿ, ನಾಗಸ್ವರ ಕಲಾವಿದ ನಾಗೇಶ್ ಬಪ್ಪನಾಡು ಅಕೌಂಟೆಂಟ್ ಶಿವಶಂಕರ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
27/09/2022 08:31 pm