ಮುಲ್ಕಿ: ಹಳೆಯಂಗಡಿ ಸಮೀಪದ ಪಾವಂಜೆ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಜೀರ್ಣೋದ್ಧಾರದ ಕಾರ್ಯಗಳು ಭರದಿಂದ ನಡೆಯುತ್ತಿದ್ದು, ಬ್ರಹ್ಮಕಲಶೋತ್ಸವದವರೆಗೆ ದೇವರನ್ನು ನಿರಂತರ ಸ್ತುತಿಸುವ ಉದ್ದೇಶದಿಂದ ದ ಗ್ರಾಮದ ವಿವಿಧ ಭಜನಾ ಮಂಡಳಿಗಳಿಂದ ಮತ್ತು ಸಂಘ-ಸಂಸ್ಥೆಗಳಿಂದ ನಿರಂತರ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಬೆಳಗ್ಗೆ ದೇವಸ್ಥಾನದ ಅರ್ಚಕ ವಾಸುದೇವ ಭಟ್,ಗಣೇಶ್ ಭಟ್ ವೈದಿಕ ವಿಧಿ ವಿಧಾನಗಳು ನಡೆದುಹಿರಿಯ ವಿದ್ವಾಂಸ ಕೃಷ್ಣ ಭಟ್ ವಿಶೇಷ ಪ್ರಾರ್ಥನೆ ಸಲ್ಲಿಸಿ ಭಜನೆಯಿಂದ ಸಾನಿಧ್ಯ ವೃದ್ಧಿ ಯಾಗುವುದರ ಜೊತೆಗೆ ಲೋಕದ ಸಮಸ್ತ ದುರಿತಗಳು ನಾಶವಾಗಿ ಅಭಿವೃದ್ಧಿ ಸಾದ್ಯ ಎಂದರು.
ಬಳಿಕ ಧಾರ್ಮಿಕ ಪರಿಷತ್ ಸದಸ್ಯ ಭುವನಾಭಿರಾಮ ಉಡುಪ ದೀಪ ಬೆಳಗಿಸುವ ಮುಖಾಂತರ ಭಜನಾ ಕಾರ್ಯಕ್ರಮಕ್ಕೆ
ಚಾಲನೆ ನೀಡಿದರು. ಈ ಸಂದರ್ಭ ದೇವಸ್ಥಾನದ ಆಡಳಿತ ಮೊಕ್ತೇಸರ ಸೂರ್ಯ ಕುಮಾರ್, ಬ್ರಹ್ಮಕಲಶೋತ್ಸವ ಹಾಗೂ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಪ್ರಕಾಶ್ ಎಂ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನಾನಿಲ್ ಉಪಸ್ಥಿತರಿದ್ದರು. ಭಜನಾ ಕಾರ್ಯಕ್ರಮ ದೇವಸ್ಥಾನದ ಬ್ರಹ್ಮಕಲಶೋತ್ಸವದ ವರೆಗೆ ನಿರಂತರವಾಗಿ ಸಂಜೆ ಸಂಜೆ 5.30 ಗಂಟೆಯಿಂದ 7ರವರೆಗೆ ನಡೆಯಲಿದೆ.
Kshetra Samachara
26/09/2022 09:51 am