ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅತಿಕಾರಿಬೆಟ್ಟು:ಮಕ್ಕಳ ಬೆಳವಣಿಗೆಗೆ ಪೋಷಕರ ಸಹಕಾರ ಅಗತ್ಯವಿದೆ: ಮನೋಹರ ಕೋಟ್ಯಾನ್

ಮುಲ್ಕಿ: ಇಲ್ಲಿಗೆ ಸಮೀಪದ ಅತಿಕಾರಿಬೆಟ್ಟು ಗ್ರಾಮ ಪಂಚಾಯತ್ ಸಭಾಭವನದಲ್ಲಿ ಪೋಷಣ್ ಅಭಿಯಾನ ಮಾಸಾಚರಣೆ ಹಾಗೂ ಜಾಥಾ ಕಾರ್ಯಕ್ರಮ ನಡೆಯಿತು.ಅತಿಕಾರಿಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಮನೋಹರ ಕೋಟ್ಯಾನ್ ಮಾತನಾಡಿ ಮಕ್ಕಳ ಬೆಳವಣಿಗೆಗೆ ಪೋಷಕರ ಸಹಕಾರ ಅಗತ್ಯವಿದೆ ಎಂದರು.ಬಳಿಕ ಜಾಥಾ ನಡೆಯಿತು.

ಉಪಾಧ್ಯಕ್ಷೆ ಶಶಿಕಲಾ, ಪ್ರಜ್ಞಾ ಸಲಹಾ ಕೇಂದ್ರದ ಯೋಜನಾ ಸಂಯೋಜಕ ವಿಲಿಯಂ ಸ್ಯಾಮುವೇಲ್, ವಲಯ ಸಂಯೋಜಕ ಅಶೋಕ್, ಶಿಶು ಅಭಿವೃದ್ಧಿ ಇಲಾಖೆಯ ಮುಲ್ಕಿ ವಲಯದ ಮೇಲ್ವಿಚಾರಕಿ ಸುಲೋಚನ, ಸಮುದಾಯ ಆರೋಗ್ಯ ಅಧಿಕಾರಿ ವಿಲ್ಮಾ, ಗ್ರಾಮ ಕರಣಿಕ ಜ್ಞಾನೇಶ್ವರಿ, ಗ್ರಾ ಪಂ ಸದಸ್ಯರಾದ ಜಯಕುಮಾರ್, ಸುಧಾಕರ ಶೆಟ್ಟಿ, ವೇದಾವತಿ, ಅಂಗನವಾಡಿ ಕಾರ್ಯಕರ್ತೆಯರು, ಸ್ವಸಹಾಯ ಸಂಘದ ಸದಸ್ಯರು, ಗ್ರಾಮ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

23/09/2022 04:27 pm

Cinque Terre

984

Cinque Terre

0

ಸಂಬಂಧಿತ ಸುದ್ದಿ