ಉಪ್ಪಿನಂಗಡಿ:ಮಸೀದಿಗಳನ್ನು ಕೇಂದ್ರವಾಗಿಟ್ಟುಕೊಂಡು ಮುಸ್ಲಿಮರ ಎಲ್ಲಾ ರೀತಿಯ ಸಮಸ್ಯೆಯನ್ನು ಪರಿಹರಿಸಿ ಅವರ ಅಭಿವೃದ್ದಿಯಲ್ಲಿ ಬಹು ಮುಖ್ಯ ಪಾತ್ರ ವಹಿಸಲು ಅನುಕೂಲವಾಗುವಂತೆ ಮೊಹಲ್ಲಾ ಸಮಿತಿಗಳನ್ನು ಜಿಲ್ಲಾ ಮಟ್ಟದಲ್ಲಿ ಸಂಯೋಜಿಸುವ ಭಾಗವಾಗಿ "ಸಮಸ್ತ"ದ ಮಾರ್ಗ ದರ್ಶನದಂತೆ ಸುನ್ನಿ ಮಹಲ್ ಫೆಡರೇಶನ್ ವಲಯ ಮಟ್ಟದ ಸಮಿತಿಗಳನ್ನು ರಚಿಸಲಾಗುತ್ತಿದ್ದು ಉಪ್ಪಿನಂಗಡಿ ವಲಯ ಸಮಿತಿಯ ರಚನೆಯು ಇತ್ತೀಚೆಗೆ ಸಯ್ಯದ್ ಅನಸ್ ತಂಗಳ್‌ರವರ ದುವಾದೂಂದಿಗೆ ಉಪ್ಪಿನಂಗಡಿಯ ಮಾಲಿಕುದ್ದೀನಾರ್ ಕೇಂದ್ರ ಮಸೀದಿಯಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಉಸ್ತಾದ್ ಎಸ್ ಬಿ ದಾರಿಮಿಯವರು ಮಾತನಾಡಿ ಮಸೀದಿಗಳನ್ನು ಆಶ್ರಯಿಸಿ ಜಾರಿಯಲ್ಲಿರುವ ಮೊಹಲ್ಲಾ ವ್ಯವಸ್ಥೆಯು ಮುಸ್ಲಿಮರಿಗೆ ಧಾರ್ಮಿಕವಾಗಿ ಅವಿಭಾಜ್ಯ ಅಂಗವಾಗಿದೆ.ಆದರೆ ಕ್ಷುಲ್ಲಕ ವಿಚಾರಗಳನ್ನು ಮುಂದಿಟ್ಟು ವ್ಯವಸ್ಥೆಯನ್ನು ದುರ್ಬಲಗೊಳಿಸುವ ಯಾವುದೇ ಚಟುವಟಿಕೆಗಳಿಗೆ ಯಾರೂ ಪ್ರೋತ್ಸಾಹ ನೀಡ ಬಾರದು.ಮೊಹಲ್ಲಾಗಳ ನಾಯಕರು ಒಗ್ಗಟ್ಟು ಪ್ರದರ್ಶಿಸಿದರೆ ಮುಸ್ಲಿಮರ ಬಹುತೇಕ ಸಮಸ್ಯೆಗಳನ್ನು ಪರಿಹರಿಸಿ ಕೊಳ್ಳಬಹುದಾಗಿದೆ ಎಂದರು.
ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದ ನಝೀರ್ ಅಝ್‌ಹರಿ ಬೊಲ್ಮಿನಾರ್ ಎಸ್ ಎಮ್ ಎಫ್ ಬಗ್ಗೆ ಸಭೆಗೆ ವಿವರಿಸಿದರು
ಕಾರ್ಯಕ್ರಮದಲ್ಲಿ ವಲಯ ಸಮಿತಿ ಸದಸ್ಯರುಗಳ ಪಟ್ಟಿಯನ್ನು ಪರಿಶೀಲಿಸಿ ಚುನಾವಣಾ ಪ್ರಕ್ರಿಯೆಯನ್ನು ನಡೆಸಿದ ಅವರು ಮುಂದಿನ ಅವಧಿಗೆ ಅಧ್ಯಕ್ಷರಾಗಿ, ಬಹು.ಎಸ್ ಬಿ ಮಹಮ್ಮದ್‌ದಾರಿಮಿ,ಉಪ್ಪಿನಂಗಡಿ,ಪ್ರಧಾನ ಕಾರ್ಯದರ್ಶಿ ಯಾಗಿ ಬಿ ಎ ಹಮೀದ್,ಕೋಶಾಧಿಕಾರಿಯಾಗಿ ಅಬ್ದುಲ್ ರಹಿಮಾನ್ ಹಾಜಿ ಕೊಳೆಜಾಲ್,ಉಪಾಧ್ಯಕ್ಷರುಗಳಾಗಿ ಸಯ್ಯದ್ ಅನಸ್ ತಂಗಳ್, ಬಹು.ಅಶ್ರಫ್ ಹಾಜಿ ಸಿ ಟಿ,ಬಹು.ಹಸೈನಾರ್ ಹಾಜಿ ಬಂಡಾಡಿ,ಜತೆ ಕಾರ್ಯದರ್ಶಿಗಳಾಗಿ ಹೆಚ್ ಯೂಸುಪ್ ಹಾಜಿ ಮುಹಮ್ಮದ್ ಕರುವೇಲ್,ಅಬ್ದುಲ್ ಸಮದ್ ಕೊಕ್ಕಡ,ಜಿಲ್ಲಾ ಕೌನ್ಸಿಲರ್ ಗಳಾಗಿ ಅದ್‌ನಾನ್ ಅನ್ಸಾರಿ,ಸದಸ್ಯರಾಗಿ ಯೂಸುಫ್ ಹಾಜಿ ಪೆದಮಲೆ,ಮಹಮ್ಮದ್ ಕೂಟೆಲ್ ರವರನ್ನು ಆಯ್ಕೆಮಾಡಲಾಯಿತು.ಹಮೀದ್ ಕರಾವಳಿ ಸ್ವಾಗತಿಸಿ ಎಸ್ ಎಂ ಎಪ್ ನ ಬಗ್ಗೆ ಮಾಹಿತಿ ನೀಡಿದರು.
Kshetra Samachara
23/09/2022 07:58 am