ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟೀಲು : ಬಿ.ವಿ. ಕಾರಂತ ನೆನಪಿನಲ್ಲಿ ರಂಗಸಂಗೀತ ಕಾರ‍್ಯಾಗಾರ

ಕಟೀಲು : ರಂಗತಜ್ಞ ಬಿ. ವಿ. ಕಾರಂತರು ನಾಟಕರಂಗಕ್ಕೆ ಕೊಟ್ಟ ಕೊಡುಗೆ ಅನನ್ಯವಾದುದು. ಅವರ ಮನೆಯನ್ನೂ ಉಳಿಸಿಕೊಳ್ಳಲಿಕ್ಕಾಗಿಲ್ಲ. ಬಂಟ್ವಾಳದ ಮಂಚಿಯಲ್ಲಿ ಒಂದು ಎಕರೆಯಲ್ಲಿ ಕಾರಂತರ ನೆನಪಿಗಾಗಿ ಚಟುವಟಿಕೆಗಳನ್ನು ಮಾಡುವ ಕನಸನ್ನು ನನಸಾಗಿಸಲು ಪ್ರಯತ್ನಗಳು ನಡೆದೇ ಇವೆ ಎಂದು ಕಟೀಲು ದೇಗುಲದ ವಿಶೇಷ ಅಧಿಕಾರಿ, ನಿವೃತ್ತ ತಹಶೀಲ್ದಾರ್ ಮೋಹನ್ ರಾವ್ ಹೇಳಿದರು.

ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪದವೀಪೂರ್ವ ಕಾಲೇಜಿನಲ್ಲಿ ಲಲಿತ ಕಲಾ ಸಂಘ ಹಾಗೂ ಮಂಗಳೂರಿನ ಜರ್ನಿ ಥೇಟರ್ ಗ್ರೂಪ್ ನ ಸಹಯೋಗದಲ್ಲಿ ಬಿ.ವಿ. ಕಾರಂತ ಜನ್ಮದಿನ ಆಚರಣೆಯ ಸಲುವಾಗಿ ನಡೆದ ರಂಗಸಂಗೀತ ಕಾರ್ಯಾಗಾರದಲ್ಲಿ ಮಾತನಾಡಿದರು.

ನಾಟಕಕಾರ ರಾಘವ ಸೂರಿ ಬಿ. ವಿ. ಕಾರಂತರ ಬಗ್ಗೆ ಮಾತನಾಡಿದರು. ಜರ್ನಿ ಥೇಟರ್‌ನ ಸದಸ್ಯರು ವಿದ್ಯಾರ್ಥಿಗಳಿಗೆ ರಂಗಸಂಗೀತಗಳನ್ನು ಕಲಿಸಿಕೊಟ್ಟರು.

ಜರ್ನಿ ಥೇಟರ್‌ನ ಅಧ್ಯಕ್ಷೆ ಭವ್ಯಾ ಶೆಟ್ಟಿ, ಮೇಘನಾ ಕುಂದಾಪುರ, ಅರ್ಜುನ್ ಆಚಾರ್, ಶಶಾಂಕ್, ಶರಣ್ಯಾ, ಕಟೀಲು ಕಾಲೇಜಿನ ಪ್ರಾಚಾರ‍್ಯೆ ಕುಸುಮಾವತಿ, ಉಪನ್ಯಾಸಕಿ ಚಿನ್ಮಯ ಭಟ್ ಉಪಸ್ಥಿತರಿದ್ದರು. ಲಲಿತಕಲಾ ಸಂಘದ ಶೈಲಜಾ ಸ್ವಾಗತಿಸಿದರು. ಹೇಮಂತ ಕೃಷ್ಣ ನಿರೂಪಿಸಿದರು. ಗೀತಾ ಪ್ರಸಾದ್ ವಂದಿಸಿದರು. ವಿದ್ಯಾರ್ಥಿಗಳು ರಂಗಸಂಗೀತವನ್ನು ಪ್ರಸ್ತುತಪಡಿಸಿದರು.

Edited By : PublicNext Desk
Kshetra Samachara

Kshetra Samachara

17/09/2022 07:58 pm

Cinque Terre

1.54 K

Cinque Terre

0

ಸಂಬಂಧಿತ ಸುದ್ದಿ