ಮುಲ್ಕಿ: ಸಾರ್ವಜನಿಕ ಗಣೇಶೋತ್ಸವದ ಮೂಲಕ ಸಾಮರಸ್ಯ ಮತ್ತು ಸಂಘಟನೆ ನಿರಂತರವಾಗಿರಲಿ ಎಂದು ಕಿನ್ನಿಗೊಳಿ ಪಟ್ಟಣ ಪಂಚಾಯತ್‌ಮುಖ್ಯಾಧಿಕಾರಿ ಸಾಯಿಶ್ ಚೌಟ ಹೇಳಿದರು.
ಅವರು ಕಿನ್ನಿಗೋಳಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ ಕಿನ್ನಿಗೋಳಿ ಗಣೇಶೋತ್ಸವದಲ್ಲಿ ಎಲ್ಲಾ ಜಾತಿ ಧರ್ಮದವರು ಸೇರಿ ಗಣೇಶೋತ್ಸವ ಆಚರಿಸುತಿರುವುದು ಅಭಿನಂದನೀಯ ಇದು ನಿಜವಾದ ಸಂಘಟನೆ ಎಂದರು.
ಕಾರ್ಯಕ್ರಮದಲ್ಲಿ ಪುನರೂರು ಬ್ರಹ್ಮ ಮುಗೇರ ದೈವಸ್ಥಾನದ ಮುಕಾಲ್ದಿ ರಘರಾಮ ಪುನರೂರು ರವರನ್ನು ಸನ್ಮಾನಿಸಲಾಯಿತು.
ಗಣೇಶೋತ್ಸವ ಹಲವು ಕಾರ್ಯಕ್ರಮಗಳ ಪ್ರಾಯೋಜಕರಾದ ಉದ್ಯಮಿ ಅನಿಲ್ ಸಾಲಿಯಾನ್ ಅವರನ್ನು ಗೌರವಿಸಲಾಯಿತು.
ಗಣೇಶೋತ್ಸವದ ವತಿಯಿಂದ ನಡೆದ ವಿವಿಧ. ಸ್ಪರ್ದೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಅರ್ಪಿತಾ ಪ್ರಶಾಂತ್ ಕಟಪಾಡಿ ಅವರು ಧಾರ್ಮಿಕ ಬಾಷಣಗೈದರು.
ಉದ್ಯಮಿ ಪ್ರಥ್ವಿರಾಜ್ ಆಚಾರ್ಯ, ಜಿ.ಎಸ್.ಬಿ ಅಸೋಷಿಯೇಶನ್ ನ ಅಧ್ಯಕ್ಷ ರಾಜೇಶ್ ನಾಯಕ್, ಮಂಗಳೂರು ಲೇಡಿಸ್ ಬ್ಯೂಟಿಪಾರ್ಲರ್ ಅಸೋಸಿಯೇಶನ್ ನ ಅಧ್ಯಕ್ಷೆ ಬಬಿತಾ ಶೆಟ್ಟಿ, ನಿವೃತ್ತ ಪೋಸ್ಟ್‌ಮಾಸ್ಟರ್ ನಾಗೇಶ್, ಶಾರದಾ ಆರ್ಟ್ಸ್ ನ ಪದ್ಮನಾಭ ಸುರತ್ಕಲ್, ಕಿನ್ನಿಗೋಳಿ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಸುರೇಶ್ ಪದ್ಮನ್ನೂರು ಮತ್ತಿತರರು ಉಪಸ್ಥಿತರಿದ್ದರು. ಭುವನಾಭಿರಾಮ ಉಡುಪ ಸ್ವಾಗತಿಸಿ ಶರತ್ ಶೆಟ್ಟಿ ಕಿನ್ನಿಗೋಳಿ ನಿರೂಪಿಸಿದರು.
Kshetra Samachara
01/09/2022 05:49 pm