ಮುಲ್ಕಿ:ಯಕ್ಷಗಾನ ಅಕಾಡಮಿಯಿಂದ ಪಾರ್ತಿ ಸುಬ್ಬ ಪ್ರಶಸ್ತಿ ಘೋಷಿತ ಛಾಂದಸ ಗಣೇಶ ಕೊಲಕಾಡಿ ಅವರನ್ನು ಸೋಮವಾರ ರಜತಮಹೋತ್ಸವ ವರ್ಷಾಚರಣೆ ಸಂಭ್ರಮದಲ್ಲಿರುವ ಕಿನ್ನಿಗೋಳಿಯ ಅನಂತಪ್ರಕಾಶದ ಪರವಾಗಿ ಗೌರವಿಸಲಾಯಿತು.
ಈ ಸಂದರ್ಭ ಮಾತನಾಡಿದ ಸಂಸ್ಥೆಯ ನಿರ್ದೇಶಕ ಕೊಡೆತ್ತೂರು ಸಚ್ಚಿದಾನಂದ ಉಡುಪ, ಕೊಲಕಾಡಿಯವರ ಕರಳು ಕೊರಳು ಕವನ ಸಂಕಲವನ್ನು ತಮ್ಮ ಪ್ರಕಾಶನದಿಂದ ಪ್ರಕಟಿಸಿ ಎರಡು ದಿನಗಳ ಹಿಂದೆಯಷ್ಟೇ ಬಿಡುಗಡೆ ಮಾಡಿರುವುದು ನಮಗೂ ಹೆಮ್ಮೆ ತಂದಿದೆ. ಈಗಾಗಲೇ ಕೊಲಕಾಡಿಯವರ ಮೂರು ಕೃತಿಗಳನ್ನು ನಮ್ಮ ಪ್ರಕಾಶನದಿಂದ ಪ್ರಕಟಿಸಲಾಗಿದೆ. ಅಲ್ಲದೆ ಈ ಹಿಂದೆ ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತ ಕವಿ ಡಾ. ಸೀಮಂತೂರು ನಾರಾಯಣ ಶೆಟ್ಟಿಯವರ ಮೂರು ಕೃತಿಗಳನ್ನು ಹಾಗೂ ಮತ್ತೋರ್ವ ಪ್ರಶಸ್ತಿ ಪುರಸ್ಕೃತ ಸಾಹಿತಿ ಶ್ರೀಧರ ಡಿ.ಎಸ್ ಅವರ ಕಿರು ಕಾದಂಬರಿ ಗೋವಿಪ್ರವನ್ನು ಪ್ರಕಟಿಸಿರುವುದು ನಮ್ಮ ಸಂಸ್ಥೆಗೆ ಸಾರ್ಥಕ್ಯವನ್ನುಂಟು ಮಾಡಿದೆ ಎಂದು ಹೇಳಿದರು.
ಸಾಹಿತ್ಯ ಪರಿಷತ್ ಮೂಲ್ಕಿ ತಾಲೂಕು ಘಟಕದ ಅಧ್ಯಕ್ಷೆ ಗಾಯತ್ರೀ ಎಸ್ ಉಡುಪ. ಯಕ್ಷಲಹರಿಯ ಅಧ್ಯಕ್ಷ ರಘುನಾಥ ಕಾಮತ್, ಮೂಲ್ಕಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ನಿಶಾಂತ್ ಕಿಲೆಂಜೂರು.ಸಜ್ಜನ ಬಂಧುಗಳು ಸಂಸ್ಥೆಯ ದೇವದಾಸ ಮಲ್ಯ. ಪ್ರಕಾಶ್ ಆಚಾರ್ ಉಪಸ್ಥಿತರಿದ್ದರು.
Kshetra Samachara
29/08/2022 08:47 pm