ಮುಲ್ಕಿ: ಕಿನ್ನಿಗೋಳಿ ರಾಮ ಮಂದಿರದ ಜಿ.ಎಸ್.ಬಿ ಮಾತೃ ಮಂಡಳೀಯ ಪ್ರತಿಭಾ ಪುರಸ್ಕಾರ, ಕಿನ್ನಿಗೋಳಿ ರಾಮ ಮಂದಿರದ ಸಭಾ ಭವನದಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಪತ್ರಕರ್ತರಘುನಾಥ ಕಾಮತ್ ಕೆಂಚನಕೆರೆ ಮಾತನಾಡಿ ನಮ್ಮ ಸಮಾಜ ಎಂಬ ಹೆಮ್ಮೆ ನಮಗಿರಲಿ, ಇನ್ನಿತರ ಸಮಾಜದವರನ್ನು ಗೌರವಯುತವಾಗಿ ಕಾಣಬೇಕು, ನಿರಂತರ ಧಾರ್ಮಿಕ ಚಟುವಟಿಕೆ ಗಳಿಂದ ನಮ್ಮ ಸಂಸ್ಥೆ ಇನ್ನಷ್ಟು ಎತ್ತರವಾಗಿ ಬೆಳೆಯಲಿ ಎಂದರು.
ಈ ಸಂದರ್ಭ ಶಿಕ್ಷನ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿಘ್ನೆಶ್ ಮಲ್ಯ, ರತನ್ ಕಾಮತ್ ರವರನ್ನು ಸನ್ಮಾನಿಸಲಾಯಿತು ಹಾಗೂ ಪತ್ರಕರ್ತ, ಯಕ್ಷಲಹರಿ ಅಧ್ಯಕ್ಷ ರಘುನಾಥ ಕಾಮತ್ ಕೆಂಚನಕೆರೆ ಅವರನ್ನು ಗೌರವಿಸಲಾಯಿತು. ಮಾತೃ ಮಂಡಳಿ ಅಧ್ಯಕ್ಷೆ ಬಾರತೀ ಶಣೈ, ಜಿಎಸ್ ಬಿ ಕಾರ್ಯದರ್ಶಿರಾಧಾ ಕೃಷ್ಣ ನಾಯಕ್, ಮಾತೃ ಮಂಡಳಿಯ ಅನುಷಾ ನಾಯಕ್ ರಾಧಾ ಶಣೈ, ಗಾಯತ್ರಿ ಮಲ್ಯ, ವಿಜಯ ಪ್ರಭು, ಅರ್ಚನಾ ಕಾಮತ್, ನಿಶಾ ಕಾಮತ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
26/08/2022 02:49 pm