ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುರತ್ಕಲ್: ತುಳುನಾಡಿನ ಪ್ರಗತಿಗೆ ಹಿರಿಯರ ಶ್ರಮ ಕಾರಣ: ಉಮಾನಾಥ ಕೋಟ್ಯಾನ್

ಸುರತ್ಕಲ್: ತುಳುನಾಡಿನ ಇಂದಿನ ಪ್ರಗತಿಗೆ ನಮ್ಮ ಹಿರಿಯರ ಶ್ರಮ ಕಾರಣ. ಆಟಿ ಆಚರಣೆ ಮೊದಲಾದ ಕಾರ್ಯಕ್ರಮಗಳ ಮೂಲಕ ಹಿರಿಯರ ಕಷ್ಟದ ದಿನಗಳನ್ನು ಸ್ಮರಿಸಿ ನಾವು ತಿದ್ದಿಕೊಳ್ಳೋಣ ಎಂದು ಮುಲ್ಕಿ ಮೂಡಬಿದ್ರೆ ಕ್ಷೇತ್ರದ ಶಾಸಕ ಉಮಾನಾಥ ಎ. ಕೋಟ್ಯಾನ್ ಹೇಳಿದರು.

ಸುರತ್ಕಲ್ ಬಂಟರ ಸಂಘ ಮತ್ತು ಮಹಿಳಾ ವೇದಿಕೆ ಆಶ್ರಯದಲ್ಲಿ ಚೇಳಾರು ಖಂಡಿಗೆ ಶ್ರೀ ಉಳ್ಳಾಯ ದೈವಸ್ಥಾನದ ವಠಾರದಲ್ಲಿ ನಡೆದ ಆಟಿದ ಪೊರ್ಲು ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ್ ಎಸ್. ಪೂಂಜ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಮಿಥುನ್ ರೈ, ಸುರತ್ಕಲ್ ಬಂಟರ ಸಂಘದ ಮಾಜಿ ಅಧ್ಯಕ್ಷ ದೇವಾನಂದ ಎಂ. ಶೆಟ್ಟಿ, ಉಲ್ಲಾಸ್ ಆರ್. ಶೆಟ್ಟಿ ಪೆರ್ಮುದೆ, ಸುರತ್ಕಲ್ ಮಾತಾ ಡೆವಲಪರ್ಸ್ ನ ಮಾಲಕ ಸಂತೋಷ್ ಕುಮಾರ್ ಶೆಟ್ಟಿ, ಉಡುಪಿ ಸಮೂಹ ಶಿಕ್ಷಣ ಸಂಸ್ಥೆ ಮಣಿಪಾಲದ ಉಪನ್ಯಾಸಕಿ ಅರ್ಪಿತಾ ಪ್ರಶಾಂತ್ ಶೆಟ್ಟಿ, ಉಳ್ಳಾಯ ದೈವಸ್ಥಾನದ ಗಡಿ ಪ್ರಧಾನ ಆದಿತ್ಯ ಮುಕ್ಕಾಲ್ದಿ, ಗೌರವಾಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಬಂಟರ ಸಂಘದ ಉಪಾಧ್ಯಕ್ಷ ಲೋಕಯ್ಯ ಶೆಟ್ಟಿ ಮುಂಚೂರು, ಪ್ರಧಾನ ಕಾರ್ಯದರ್ಶಿ ಪ್ರವೀಣ್ ಶೆಟ್ಟಿ, ಕೋಶಾಧಿಕಾರಿ ರತ್ನಾಕರ ಶೆಟ್ಟಿ, ಮಹಿಳಾ ವೇದಿಕೆ ಅಧ್ಯಕ್ಷೆ ಚಿತ್ರಾ ಜೆ. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸರೋಜ ಶೆಟ್ಟಿ, ಉಪಾಧ್ಯಕ್ಷೆ ಭವ್ಯಾ ಎ ಶೆಟ್ಟಿ, ಕೋಶಾಧಿಕಾರಿ ಶೈಲ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಸಾಧಕರ ನೆಲೆಯಲ್ಲಿ ಅಬ್ದುಲ್ ಬಶೀರ್ (ನಿವೃತ್ತ ಕೃಷಿ ಅಧಿಕಾರಿ), ದಯಾನಂದ ಶೆಟ್ಟಿ ಖಂಡಿಗೆ ಬೀಡು (ಕೃಷಿ ಕ್ಷೇತ್ರ), ಶಿವರಾಮ ಪಣಂಬೂರು (ಯಕ್ಷಗಾನ), ಕೆ.ಕೆ. ಪೇಜಾವರ (ಶಿಕ್ಷಣ ಜಾನಪದ), ಗೀತಾ ಎಸ್. ಶೆಟ್ಟಿ ಶಿಬರೂರು (ಸಮಾಜ ಸೇವೆ) ಗೌರವಿಸಲಾಯಿತು.

ಸಮಾರಂಭದಲ್ಲಿ ವಿಶೇಷ ಅತಿಥಿಗಳಾಗಿ ಖ್ಯಾತ ಸಿನಿಮಾ ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ ಬೈಲ್, ಚಲನ ಚಿತ್ರನಟರಾದ ಅರ್ಜುನ್ ಕಾಪಿಕಾಡ್, ವಿನೀತ್ ಕುಮಾರ್, ರಾಜೇಶ್ ಕುಡ್ಲ, ಪ್ರೇಮ್ ಶೆಟ್ಟಿ ಸುರತ್ಕಲ್, ಅನೂಪ್ ಸಾಗರ್, ಲಕ್ಷ್ಮೀಶ ಸುವರ್ಣ ಭಾಗವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಪ್ರಸಕ್ತ ಸಾಲಿನಲ್ಲಿ 575 ಕ್ಕಿಂತ ಹೆಚ್ಚು ಅಂಕ ಪಡೆದ ಬಂಟ ಸಮಾಜದ ವಿದ್ಯಾರ್ಥಿಗಳಿಗೆ ಸನ್ಮಾನ, ಸಂಘದ ಸದಸ್ಯರಿಗೆ ಕೆಸರು ಗದ್ದೆ ಕ್ರೀಡಾಕೂಟ ನಡೆಯಿತು. ಖಂಡಿಗೆ ಬೀಡಿನ ಗಡಿ ಪ್ರಧಾನ ಆದಿತ್ಯ ಮುಕ್ಕಾಲ್ದಿ ಕೆಸರುಗದ್ದೆ ಗ್ರಾಮೀಣ ಕ್ರೀಡಾಕೂಟವನ್ನು ಉದ್ಘಾಟಿಸಿದರು. ಲೋಕಯ್ಯ ಶೆಟ್ಟಿ ಸ್ವಾಗತಿಸಿ, ಚಿತ್ರಾ ಜೆ ಶೆಟ್ಟಿ ವಂದಿಸಿದರು. ರಾಜೇಶ್ವರಿ ಡಿ. ಶೆಟ್ಟಿ, ನವೀನ್ ಶೆಟ್ಟಿ ಎಡ್ಮೆಮಾರ್ ಕಾರ್ಯಕ್ರಮ ನಿರೂಪಿಸಿದರು. ತುಳುನಾಡಿನ ಖಾದ್ಯಗಳಿದ್ದ ಆಟಿಯ ಭೋಜನ ಸಭಿಕರಿಗೆ ನೀಡಲಾಯಿತು.

Edited By : PublicNext Desk
Kshetra Samachara

Kshetra Samachara

21/08/2022 07:31 am

Cinque Terre

434

Cinque Terre

0

ಸಂಬಂಧಿತ ಸುದ್ದಿ