ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟೀಲು:ಕಲಾವಿದರನ್ನು  ಪ್ರೋತ್ಸಾಹಿಸಿದರೆ ಕಲೆಯನ್ನು ಉಳಿಸಿ ಬೆಳೆಸಿದಂತೆ: ಲಕ್ಷ್ಮೀನಾರಾಯಣ ಆಸ್ರಣ್ಣ

ಕಟೀಲು: ಕಲಾವಿದರನ್ನು  ಪ್ರೋತ್ಸಾಹಿಸಿದರೆ ಕಲೆಯನ್ನು ಉಳಿಸಿ ಬೆಳೆಸಿದಂತೆ ಎಂದು ಕಟೀಲು ದೇಗುಲದ ಅರ್ಚಕ ವೆ. ಮೂ. ಲಕ್ಷ್ಮೀನಾರಾಯಣ ಆಸ್ರಣ್ಣ ಹೇಳಿದರು.

ಅವರು ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಸಭಾಭವನದಲ್ಲಿ ಕೀರ್ತಿ ಶೇಷ ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಸಂಸ್ಮರಣಾ  ಸಮಿತಿ ಮುಂಬೈ , ಯು.ಎ.ಇ  ವತಿಯಿಂದ ನಡೆದ ಸಂಸ್ಮರಣೆಯ ಯಕ್ಷಗಾನ ಕಾರ್ಯಕ್ರಮದ ಸಭಾಕಾರ್ಯಕ್ರಮದಲ್ಲಿ ಮಾತನಾಡಿ ಕೀರ್ತಿ ಶೇಷ ಗೋಪಾಲಕೃಷ್ಣ ಆಸ್ರಣ್ಣ  ಆಸ್ರಣ್ಣ ಸಂಸ್ಮರಣಾ ಕಾರ್ಯಕ್ರಮ ಮುಂಬೈಯಲ್ಲಿಯೂ ಪ್ರತೀ ವರ್ಣ ನಡೆಯುತ್ತಿದ್ದು ಅವರಿಗೆ ದೇಶ ವಿದೇಶದಲ್ಲಿಯೂ ಅಭಿಮಾನಿಗಳಿದ್ದಾರೆ, ಅವರ ಹೆಸರಿನಲ್ಲಿ ನಿರಂತರ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದೆ ಎಂದರು. ಕನ್ನಡ ಸಾಹಿತ್ಯ ಪರಿಷತ್ ನ ಮಾಜಿ ರಾಜ್ಯಾಧ್ಯಕ್ಷ  ಡಾ| ಹರಿಕೃಷ್ಣ ಪುನರೂರು ಮಾತನಾಡಿ, ಯಕ್ಷಗಾನ ಕಲೆಗೆ  ದೇಶ ವಿದೇಶದಲ್ಲಿಯೂ ಸ್ಥಾನ ಮಾನ ಹೊಂದಿದ್ದು,  ಕೀರ್ತಿಶೇಷ  ಗೋಪಾಲಕೃಷ್ಣ ಆಸ್ರಣ್ಣ ಹೆಸರಿನೊಂದಿಗೆ ಕಾರ್ಯಕ್ರಮ ನಡೆಯುವುದು ಅಭಿನಂದನೀಯ ಎಂದರು.

ಈ ಸಂದರ್ಭ ಕಲಾಪೋಷಕ ಕರ್ನಿರೆ ಪ್ರಭಾಕರ ಸುವರ್ಣ , ಕಲಾವಿದ ಚಂದ್ರಶೇಖರ ಧರ್ಮಸ್ಥಳ ಅವರನ್ನು ಸನ್ಮಾನಿಸಲಾಯಿತು. ಯಕ್ಷಲಹರಿ ಕಿನ್ನಿಗೋಳಿ ಅಧ್ಯಕ್ಷ ರಘನಾಥ ಕಾಮತ್ ಕೆಂಚನಕೆರೆ, ಮೂಲ್ಕಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ನಿಶಾಂತ್ ಶೆಟ್ಟಿ ಕಿಲೆಂಜೂರು ರವರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ  ಗೋಪಾಲಕೃಷ್ಣ ಆಸ್ರಣ್ಣ, ಧಾರ್ಮಿಕ ಪರಿಷತ್ ಸದಸ್ಯ ಭವನಾಭಿರಾಮ ಉಡುಪ, ಅಶ್ವತ್ ರಾವ್  ಕಟೀಲು ಮತ್ತಿತರರು ಉಪಸ್ಥಿತರಿದ್ದರು. ಪು ಗುರುಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.

ಶ್ರೀ ಮಹಾಲಿಂಗೇಶ್ವರ ಪ್ರವಾಸಿ ಯಕ್ಷಗಾನ ಮಂಡಳಿ ಪುತ್ತೂರು ಇವರಿಂದ ಕಂಸ ವಿವಾಹ ಮತ್ತು ಭಾರತ ರತ್ನ ಯಕ್ಷಗಾನ ನಡೆಯಿತು.

Edited By : PublicNext Desk
Kshetra Samachara

Kshetra Samachara

16/08/2022 08:33 pm

Cinque Terre

1.34 K

Cinque Terre

0

ಸಂಬಂಧಿತ ಸುದ್ದಿ