ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರಾಪುರ: ಉತ್ತಿಷ್ಟ ಭಾರತ ರಾಷ್ಟ್ರೀಯತೆಯ ಜಾಗೃತ ಕಾರ್ಯಕ್ರಮ

ಸುರತ್ಕಲ್:ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಅಂಗವಾಗಿ ಬಿಜೆಪಿ ಮಂಗಳೂರು ನಗರ ಉತ್ತರ ಮಂಡಲ ವ್ಯಾಪ್ತಿಯಲ್ಲಿ, ವಿಧಾನ ಸಭಾ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ ವೈ ನೇತೃತ್ವದಲ್ಲಿ ಸರಣಿ ಕಾರ್ಯಕ್ರಮ ಆಯೋಜಿಸಲಾಗಿದ್ದು ಆ.14ರಂದು 3 ಗಂಟೆಗೆ ಚಿತ್ರಾಪುರ ಕಡಲ ತೀರದ ಪಣಂಬೂರು ಕುಳಾಯಿ ಮೊಗವೀರ ಮಹಾಸಭಾದ ಬಯಲು ರಂಗ ಮಂದಿರದಲ್ಲಿ ಉತ್ತಿಷ್ಠ ಭಾರತ ರಾಷ್ಟ್ರೀಯತೆಯನ್ನು ಬಿಂಬಿಸುವ ವಿಶೇಷ ಕಾರ್ಯಕ್ರಮ ನಡೆಯಲಿದೆ.

ಚಿತ್ರಾಪುರ ಸಭಾಂಗಣದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಮೃತ ಮಹೋತ್ಸವದ ಕಾರ್ಯಕ್ರಮವನ್ನು ಅಂತಿಮ ಗೊಳಿಸಲಾಯಿತು. ವಾಗ್ಮಿ ಪ್ರಕಾಶ್ ಮಲ್ಪೆ ಮತ್ತು ಬಳಗದಿಂದ ಕಾರ್ಯಕ್ರಮ ನಡೆಯಲಿದ್ದು, ಪ್ರಸಿದ್ದ ಹಿನ್ನಲೆ ಗಾಯಕರಿ೦ದ ಗೀತ ಕಥನ,ಭಕ್ತಿ ಗೀತೆ ಕಾರ್ಯಕ್ರಮ ಆಯೋಜಿಸಲಾಗಿದೆ.

ಕಾರ್ಯಕ್ರಮಕ್ಕೆ ಬರುವ ಎಲ್ಲಾ ದೇಶ ಭಕ್ತರಿಗೂ,ವೀಕ್ಷಕರಿಗೂ *ದೋಸಾ ಕ್ಯಾಂಪ್* ಮೂಲಕ ಉಚಿತ ಫಲಹಾರ ವಿತರಣೆ ವ್ಯವಸ್ಥೆ ಮಾಡಲಾಗಿದೆ. ವಿಧಾನ ಸಭಾ ಕ್ಷೇತ್ರದಾದ್ಯಂತ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದ್ದು, ಆ.13ರಂದು ಸಂಜೆ 6.30ಕ್ಕೆ ರಂದು ಪದವಿನಂಗಡಿಯಿಂದ ಮೇರಿಹಿಲ್ ಜಂಕ್ಷನ್ ವರೆಗೆ, ಯುವ ಮೋರ್ಚಾದಿಂದ ಅಲಂಕಾರ ಕಾರ್ಯಕ್ರಮ, ಬೆಳಗ್ಗೆ 11ರಿಂದ ಮಹಿಳಾ ಮೋರ್ಚಾದಿಂದ ಬೋಂದೆಲ್‌ ನಿಂದ ಕಾವೂರು ಜಂಕ್ಷನ್ ವರೆಗೆ ಪಾದಯಾತ್ರೆ ಆಯೋಜಿಸಲಾಗಿದೆ.

ಆ.13ರಂದು ಸಂಜೆ 5ಗಂಟೆಗೆ ಮಹಾ ಶಕ್ತಿಕೇಂದ್ರ ಸುರತ್ಕಲ್ ನಗರ 01 ರಿಂದ ಕರ್ನಾಟಕ ಸೇವಾ ವೃಂದ ಸಭಾಂಗಣದಿಂದ ಹಳೆ ಮಾರಿಗುಡಿವರೆಗೆ ಸ್ವಾತಂತ್ರ್ಯ ಹೋರಾಟಗಾರರ ಭಾವ ಚಿತ್ರದೊಂದಿಗೆ ಮೆರವಣಿಗೆ ನಡೆಯಲಿದೆ.

ನೀರುಮಾರ್ಗ ಬೊಂಡಂತಿಲದಲ್ಲಿ ಶ್ರೀ ಸದಾಶಿವ ದೇವಸ್ಥಾನದಿಂದ ತಿರಂಗಾ ಜಾಥಾ, 11 ಗಂಟೆಗೆ ಬಂಗಕೂಳೂರಿನಲ್ಲಿ ವಿಶೇಷ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಲಿದೆ. ಸಂಜೆ ಸಸಿಹಿತ್ಲು ಬೀಚ್ ನಿಂದ ಬೈಕಂಪಾಡಿ ವರೆಗೆ ವಿಭಜನ್ ವಿಭೀಷನ್ ಸ್ಮೃತಿ ದಿವಸ್ ಪ್ರಯುಕ್ತ ರಾಷ್ಟ್ರಧ್ವಜದೊಂದಿಗೆ ಮೌನ ಮೆರವಣಿಗೆ ನಡೆಯಲಿದೆ.

ಸುರತ್ಕಲ್ 2ರ ಮಹಾಶಕ್ತಿ ಕೇಂದ್ರದಿಂದ ಆ.15ರಂದು ಬೆಳಗ್ಗೆ 10 ಗಂಟೆಗೆ ಕಾಲ್ನಡಿಗೆ ಜಾಥಾ, ಕಾವೂರು ಜಂಕ್ಷನ್‌ನಿ೦ದ ಕಾವೂರು ಬಿಜೆಪಿ ಕಾರ್ಯಾಲಯ ದವರೆಗೆ ಪಾದಯಾತ್ರೆ, ಬಡಗಎಡ ಪದವಿನಲ್ಲಿ ಹನುಮಾನ್ ಮ೦ದಿರದಿ೦ದ ವಿವೇಕಾನಂದ ಕಾಲೇಜುವರೆಗೆ ಪಾದಯಾತ್ರೆ ಆಯೋಜಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಲಾಯಿತು. ಕಾರ್ಯಕ್ರಮದ ಯಶಸ್ಸಿಗೆ ಸರ್ವ ಕಾರ್ಯಕರ್ತರು ಭಾಗಿಯಾಗಬೇಕು ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ನುಡಿದರು. ಬಿಜೆಪಿ ಮುಖಂಡರು ಪದಾಧಿಕಾರಿಗಳು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

12/08/2022 05:33 pm

Cinque Terre

738

Cinque Terre

0

ಸಂಬಂಧಿತ ಸುದ್ದಿ