ಮುಲ್ಕಿ: ಹಳೆಯಂಗಡಿ ಸಮೀಪದ ಸಸಿಹಿತ್ಲು ಕದಿಕೆ ಮೊಗವೀರ ಸಭಾ ವತಿಯಿಂದ ಸಮುದ್ರ ಪೂಜೆ ಭಕ್ತಿ ಭಾವದಿಂದ ನಡೆಯಿತು.
ಸಸಿಹಿತ್ಲು ಶ್ರೀ ರಾಧಾಕೃಷ್ಣ ಭಜನಾ ಮಂದಿರದ ಬಳಿಯಿಂದ ಭಜನೆ ಮೂಲಕ ಸಮುದ್ರ ತೀರಕ್ಕೆ ಸಾಗಿ ಸಮುದ್ರರಾಜನಿಗೆ ಹಾಲು ಹಾಗೂ ವಿಶೇಷ ಪೂಜೆ ಅರ್ಪಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಈ ಸಂದರ್ಭ ಕದಿಕೆ ಮೊಗವೀರ ಸಭಾದ ಅಧ್ಯಕ್ಷ ರೋಹಿತಾಕ್ಷ ಸುವರ್ಣ, ಉಪಾಧ್ಯಕ್ಷ ಗಿರೀಶ್ ಶ್ರೀಯಾನ್, ಸಸಿಹಿತ್ಲು ರಾಧಾಕೃಷ್ಣ ಭಜನಾ ಮಂದಿರದ ಅಧ್ಯಕ್ಷ ಗಣೇಶ್ ಮೆಂಡನ್, ಪದಾಧಿಕಾರಿಗಳು,ಗುರಿಕಾರರು, ಗ್ರಾಮಸ್ಥರು ಉಪಸ್ಥಿತರಿದ್ದರು
Kshetra Samachara
12/08/2022 10:24 am