ಮುಲ್ಕಿ: ಫೇಮಸ್ ಯೂತ್ ಕ್ಲಬ್ (ರಿ) ಮತ್ತು ಫೇಮಸ್ ಮಹಿಳಾ ಮಂಡಲ 10ನೇ ತೋಕೂರು ಮಾರ್ಗದರ್ಶನದಲ್ಲಿ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ (ರಿ)ತೋಕೂರು, ವಿನಾಯಕ ಮಿತ್ರ ಮಂಡಳಿ (ರಿ) ಪಕ್ಷಿಕೆರೆ, ಓಂ ಕ್ರಿಕೆಟರ್ಸ್ ಪಾವಂಜೆ
ಜಂಟಿ ಆಶ್ರಯದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಯೋಗಥಾನ್ 2022 ಕಾರ್ಯಕ್ರಮವನ್ನು ಪದ್ಮಾವತಿ ಲಾನ್ ಎಸ್.ಕೋಡಿಯಲ್ಲಿ ನಡೆಯಿತು.
ಮುಲ್ಕಿ ತಾಲೂಕಿನ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶ್ರೀ ನಿಶಾಂತ್ ಕಿಲೆಂಜೂರು ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.
ಫೇಮಸ್ ಯೂತ್ ಕ್ಲಬ್ ಗೌರವಾಧ್ಯಕ್ಷ ಗುರುರಾಜ್ ಎಸ್ ಪೂಜಾರಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ "ಯೋಗದಿಂದ ರೋಗ ಮುಕ್ತ ಜೀವನ ಸಾಧ್ಯ"ಎಂದರು.
ಕಾರ್ಯಕ್ರಮದಲ್ಲಿ ನೆಹರು ಯುವ ಕೇಂದ್ರ ಮಂಗಳೂರು ಇ ಆಡಳಿತಾಧಿಕಾರಿ ಜಗದೀಶ್, ಯುವ ಸಮನ್ವಯಾಧಿಕಾರಿ ರಘುವೀರ್ ಸೂಟರ್ ಪೇಟೆ, ಯುವ ಪರಿವರ್ತಕ ಪ್ರೀತೇಶ್, ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ)ಯ ಬಜ್ಪೆ ಶಾಖೆಯ ಯೋಗ ಬಂಧು ಲೋಕನಾಥ್ ಬಂಗೇರ, ಪಡುಪಣಂಬೂರು ಗ್ರಾ ಪಂ ಕಾರ್ಯದರ್ಶಿ ಲೋಕನಾಥ ಭಂಡಾರಿ, ಪಕ್ಷಿಕೆರೆ ವಿನಾಯಕ ಮಿತ್ರ ಮಂಡಳಿಯ ಅಧ್ಯಕ್ಷ ಚಂದ್ರಹಾಸ್, ತೋಕೂರು ಗಜಾನನ ಸ್ಪೋರ್ಟ್ಸ್ ನ ಉಪಾಧ್ಯಕ್ಷ ಸುನಿಲ್ ಶೆಟ್ಟಿಗಾರ್, ಓಂ ಕ್ರಿಕೆಟರ್ಸ್ ಪಾವಂಜೆ ಪ್ರತಿನಿಧಿ ಹರೀಶ್ ಕುಲಾಲ್, ತೋಕೂರು ಫೇಮಸ್ ಯೂತ್ ಕ್ಲಬ್ (ರಿ) ತೋಕೂರು ಅಧ್ಯಕ್ಷ ಭಾಸ್ಕರ್ ಅಮೀನ್, ಮಹಿಳಾ ಅಧ್ಯಕ್ಷೆ ಪ್ರೇಮಲತಾ ಯೋಗೀಶ್ ಉಪಸ್ಥಿತರಿದ್ದರು.
ಯೋಗ ಶಿಕ್ಷಕ ಲೋಕನಾಥ ಬಂಗೇರರವರು ಶಿಬಿರಾರ್ಥಿಗಳಿಗೆ ಯೋಗ ತರಬೇತಿಯನ್ನು ನೆರವೇರಿಸಿ ಕೊಟ್ಟರು.
ಫೇಮಸ್ ಯೂತ್ ಕ್ಲಬ್ಬಿನ ಅಧ್ಯಕ್ಷ ಭಾಸ್ಕರ್ ಅಮೀನ್ ತೋಕೂರು ಸ್ವಾಗತಿಸಿದರು.ಸದಸ್ಯ ಮಹಮ್ಮದ್ ಶರೀಫ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು. ಬಳಿಕ ಯೋಗ ಕಾರ್ಯಕ್ರಮ ನಡೆಯಿತು.
Kshetra Samachara
07/08/2022 03:50 pm