ಮುಲ್ಕಿ: ಕಾರ್ಗಿಲ್ ವಿಜಯೋತ್ಸವದ ನೆನಪಿಗಾಗಿ ಮುಲ್ಕಿ ಲಯನ್ಸ್ ಕ್ಲಬ್ ಮತ್ತು ಲಿಯೋ ಕ್ಲಬ್ ವತಿಯಿಂದ
ಹೆಜಮಾಡಿ ಕೋಡಿ ವಿದ್ಯಾ ಪ್ರಸಾರ ವಿದ್ಯಾ ಮಂದಿರ ಶಾಲೆಯಲ್ಲಿ ಆಪರೇಷನ್ ವಿಜಯ್ ಯುದ್ಧದಲ್ಲಿ ಹೋರಾಡಿದ ವೀರಯೋಧ ಪ್ರವೀಣ್ ಶೆಟ್ಟಿ ಉಳ್ಳಾಲರವರನ್ನು ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಲ್ಕಿ ಲಯನ್ಸ್ ಕ್ಲಬ್ ಅಧ್ಯಕ್ಷೆ ನೀರಜಾಕ್ಷಿ ಅಗರವಾಲ್ ವಹಿಸಿದ್ದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ವಿನೋದ್ ಕೋಟ್ಯಾನ್ ಮಾತನಾಡಿ ಭಾರತದ ರಕ್ಷಣೆಗಾಗಿ ಹೋರಾಡಿದ ವೀರ ಸೈನಿಕರ ನೆನಪು ಅವಿಸ್ಮರಣೀಯ ಎಂದರು.
ವೇದಿಕೆಯಲ್ಲಿ ಆಡಳಿತ ಮಂಡಳಿ ಉಪಾಧ್ಯಕ್ಷ ದಯಾನಂದ ಹೆಜ್ಮಾಡಿ, ಪ್ರಾಂಶುಪಾಲ ಸುನಿಲ್, ಮುಲ್ಕಿ ಲಯನ್ಸ್ ಹಾಗೂ ಲಿಯೋ ಕ್ಲಬ್ ನ ವಿನೋದ್ ಸಾಲ್ಯಾನ್, ಶೀತಲ್ ಸುಶೀಲ್, ಸದಾಶಿವ ಹೊಸದುರ್ಗ, ಪ್ರಯುಷ್ ಸುವರ್ಣ, ಕವನ್ ಕುಬೆವೂರು ಮತ್ತಿತರರು ಉಪಸ್ಥಿತರಿದ್ದರು.
Kshetra Samachara
06/08/2022 03:36 pm