ಮುಲ್ಕಿ: ಪಡುಪಣಂಬೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಲ್ನಾಡ್ ಕೆಎಸ್ ರಾವ್ ನಗರಕ್ಕೆ ಹೋಗುವ ರಸ್ತೆ ಬಳಿಯಲ್ಲಿ ಕುಡಿಯುವ ನೀರಿನ ಪೈಪ್ ಒಡೆದು ನೀರು ಪೋಲಾಗುತ್ತಿದೆ.
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳ್ಳಾಯರು,ಕೋಲ್ನಾಡ್ ಪರಿಸರಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಪೈಪ್ ಹೊಡೆದು ಕಾರಂಜಿಯಂತೆ ನೀರು ಪೋಲಾಗುತ್ತಿದೆ. ಕೂಡಲೇ ಪಂಚಾಯಿತಿ ಎಚ್ಚೆತ್ತು ಪೈಪ್ ದುರಸ್ತಿ ಪಡಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
Kshetra Samachara
03/08/2022 07:35 am