ಮುಲ್ಕಿ: 75ನೇ ವರ್ಷದ ಸಂಭ್ರಮದಲ್ಲಿರುವ ಕಿನ್ನಿಗೋಳಿಯ ಯುಗಪುರುಷ ಹಾಗೂ ಆರದಿರಲಿ ಬದುಕು ಆರಾಧನಾ ಸಂಸ್ಥೆ ಮೂಡುಬಿದಿರೆ ವಲಯದ ಸಹಯೋಗದಲ್ಲಿ ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ಪತ್ರಿಕಾ ದಿನಾಚರಣೆ, ಮಾಧ್ಯಮ ಸಾಧಕರಿಗೆ ಸಮ್ಮಾನ ಕಾರ್ಯಕ್ರಮ ನಡೆಯಿತು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಕಸಾಪದ ಮಾಜೀ ರಾಜ್ಯಾಧ್ಯಕ್ಷ ಡಾ. ಹರಿಕೃಷ್ಣ ಪುನರೂರುರವರು ಸಾಧಕ ಪತ್ರಕರ್ತರನ್ನು ಸನ್ಮಾನಿಸಿ ಮಾತನಾಡಿ ಪತ್ರಕರ್ತರು ಸಮಾಜದ ಆಸ್ತಿಯಾಗಿದ್ದು ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯ ಶ್ಲಾಘನೀಯ ಎಂದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಿನ್ನಿಗೋಳಿ ಯುಗಪುರುಷದ ಪ್ರಧಾನ ಸಂಪಾದಕರಾದ ಕೆ. ಭುವನಾಭಿರಾಮ ಉಡುಪರು ವಹಿಸಿದ್ದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ಸೇವಾರತ್ನ ರಾಜ್ಯ ಪ್ರಶಸ್ತಿ ಪುರಸ್ಕೃತ ಸಾಣೂರು ಅರುಣ್ ಶೆಟ್ಟಿಗಾರ್, ಆರಾದಿರಲಿ ಬದುಕು ಆರಾಧನಾ ಸಂಸ್ಥೆಯ ನಿರ್ವಾಹಕಿ ಪದ್ಮಶ್ರೀ ಭಟ್ ನಿಡ್ಡೋಡಿ, ಯುವ ಕೃಷಿಕ ಡಾ. ನಾಗರಾಜ ಶೆಟ್ಟಿ ಅಂಬೂರಿ, ದೇವಿಪ್ರಸಾದ್ ಶೆಟ್ಟಿ, ಅಭಿಷೇಕ್ ಶೆಟ್ಟಿ ಐಕಳ, ದೀನ್‌ರಾಜ್ ಕೆ., ಪ್ರಸಾದ ಉಡುಪಿ, ಬಸವರಾಜ ಮಂತ್ರಿ ಉಪಸ್ಥಿತರಿದ್ದರು.
ಪತ್ರಕರ್ತರುಗಳಾದ ಡಾ. ಶೇಖರ್ ಅಜೆಕಾರು, ಧನಂಜಯ ಗುರುಪುರ, ಜಿತೇಂದ್ರ ಕುಂದೇಶ್ವರ, ಕಿರಣ್ ಮಂಜನಬೈಲು, ಆರ್. ಸಿ. ಭಟ್, ರಘುನಾಥ ಕಾಮತ್, ಮಂದಾರ ರಾಜೇಶ ಭಟ್, ಹರೀಶ್ ಆದೂರು, ವಾಮನ ಕರ್ಕೇರ, ಡಾ. ರಶ್ಮಿ ಅಮ್ಮೆಂಬಳ ರನ್ನು ಗೌರವಿಸಲಾಯಿತು.
ಕಿರಣ್ ಶೆಟ್ಟಿ ಅತ್ತೂರು ನಿರೂಪಿದರು.
ಬಳಿಕ ವಾಯ್ಸ್ ಆಫ್ ಆರಾಧನಾ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
Kshetra Samachara
09/07/2022 05:53 pm