ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಸಾಂಸ್ಕೃತಿಕ ಸಂಭ್ರಮ; ಸಾಧಕರಿಗೆ ಗೌರವ

ಮಂಗಳೂರು:ರಾಷ್ಟ್ರೀಯ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಮಂಗಳೂರು ಪುರಭವನದಲ್ಲಿ ಸಾಂಸ್ಕೃತಿಕ ಸಂಭ್ರಮ ನಡೆಯಿತು.

ಸಮಾರಂಭದ ಉದ್ಘಾಟನೆಯನ್ನು ಬೆಂಗಳೂರು ವಿಶ್ರಾಂತ ಹೈಕೋರ್ಟ್ ನ್ಯಾಯಾಧೀಶರಾದ ಜಸ್ಟೀಸ್ ಅರಳಿ ನಾಗರಾಜ್ ನೆರವೇರಿಸಿದರು.

ಅಧ್ಯಕ್ಷತೆಯನ್ನು ಎನ್ ಎಸ್ ಸಿ ಡಿ ಎಫ್ ನ ಅಧ್ಯಕ್ಷ ಗಂಗಾಧರ ಗಾಂಧಿ ವಹಿಸಿದ್ದರು.

ರವೀಂದ್ರ ಮುನ್ನಿಪ್ಪಾಡಿ, ರಾಣಿ ಪುಷ್ಪಲತಾ ದೇವಿ ಮನಸಾ ಪ್ರವೀಣ್ ಭಟ್ ಉಪಸ್ಥಿತರಿದ್ದರು. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಮಾನ್ವಿ ವಹಿಸಿದ್ದರು. ಹಲವಾರು ಮಹೋನ್ನತ ಕವಿಗಳು ಸ್ವರಚಿತ ಕವನ ವಾಚನ ಮಾಡಿದರು. ಡಾ. ಎಂ ಪಿ ವರ್ಷ ಹಾಗೂ ಪಿ ವಿ ಪ್ರದೀಪ್ ಕುಮಾರ್ ರವರನ್ನು ಗೌರವಿಸಲಾಯಿತು ಡಾ. ವಾಣಿಶ್ರೀ ಕಾಸರಗೋಡು ನೇತ್ರತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘದ ವತಿಯಿಂದ ಸಾಂಸ್ಕೃತಿಕ ಸಂಭ್ರಮ ನಡೆಯಿತು.

Edited By : PublicNext Desk
Kshetra Samachara

Kshetra Samachara

07/07/2022 03:30 pm

Cinque Terre

1.47 K

Cinque Terre

0

ಸಂಬಂಧಿತ ಸುದ್ದಿ