ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: "ಸಹನೆ ಹಾಗೂ ಸಹಾಯ ಹಸ್ತದ ಮುಖಾಂತರ ಮುಲ್ಕಿ ರೋಟರಿ ಕ್ಲಬ್ ಸಾಧನೆ ಅಭಿನಂದನೀಯ"

ಮುಲ್ಕಿ: ರೋಟರಿ ಕ್ಲಬ್ ಮುಲ್ಕಿ ಯ ನೂತನ ಪದಾಧಿಕಾರಿಗಳ ಪ್ರಮಾಣವಚನ ಕಾರ್ನಾಡ್ ರೋಟರಿ ಕ್ಲಬ್ ಶತಾಬ್ದಿ ಭವನದಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ಮುಲ್ಕಿ ಚರ್ಚ ನ ಧರ್ಮ ಗುರುಗಳಾದ ಫಾದರ್ ಸಿಲ್ವರ್ ಡಿಕೋಸ್ಟ ಮಾತನಾಡಿ ಶಿಸ್ತು ಬದ್ಧ ಜೀವನದಲ್ಲಿ ಸಹನೆ ಹಾಗೂ ಸಹಾಯ ಹಸ್ತದ ಮುಖಾಂತರ ಮುಲ್ಕಿ ರೋಟರಿ ಕ್ಲಬ್ ಮತ್ತಷ್ಟು ಮುನ್ನಡೆಯಲಿ ಎಂದು ಶುಭ ಹಾರೈಸಿದರು.

ಉದ್ಯಮಿ ರೊ. ಅಭಿನಂದನ್ ಶೆಟ್ಟಿಯವರು 2022 23ನೇ ಸಾಲಿನ ನೂತನ ಅಧ್ಯಕ್ಷ ಜೋಯಿನ್ ಪ್ರಕಾಶ್ ಡಿಸೋಜಾ ಹಾಗೂ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ನಿರ್ಗಮನ ಅಧ್ಯಕ್ಷ ಶಿವರಾಮ್ ಜಿ ಅಮೀನ್, ಮೈಕಲ್ ಪಿಂಟೋ, ರೋ ನಾರಾಯಣ, ಭುಜಂಗ ಕವತ್ತಾರ್, ಜೀನರಾಜ ಸಾಲ್ಯಾನ್, ರೊ. ರವಿಚಂದ್ರ, ರೊ. ಅಶೋಕ್ ಕುಮಾರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವೈದ್ಯಕೀಯ ಹಾಗೂ ಶಿಕ್ಷಣಕ್ಕೆ ಸಹಾಯ ಹಸ್ತ ನೀಡಲಾಯಿತು. ಮುಲ್ಕಿ ವ್ಯಾಪ್ತಿಯಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕನ್ನಡದಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಾದ ಲಾವಣ್ಯ ಹಾಗೂ ರೇಣುಕಾ ರವರನ್ನು ಗೌರವಿಸಲಾಯಿತು. ರೊ.ರಾಜ ಪತ್ರಾವೋ, ವೈ ಎನ್ ಸಾಲ್ಯಾನ್ ನಿರೂಪಿಸಿದರು.

Edited By : PublicNext Desk
Kshetra Samachara

Kshetra Samachara

06/07/2022 09:51 pm

Cinque Terre

2.17 K

Cinque Terre

0

ಸಂಬಂಧಿತ ಸುದ್ದಿ