ಮುಲ್ಕಿ: ಮುಲ್ಕಿ ಸಮೀಪದ ಕೆರೆಕಾಡು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದಲ್ಲಿ ಅಷ್ಟಾವಧಾನ ಸೇವೆಯು ಜೂ 3ರಿಂದ 10ವರೆಗೆ ನಡೆಯಲಿದ್ದು, ಜೂ. 3ರಂದು ಸಂಜೆ 6:30ಕ್ಕೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಉಡುಪಿ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಯವರು ಭಜನಾ ಮಂದಿರಕ್ಕೆ ಭೇಟಿ ನೀಡಿ ಆಶೀರ್ವಚನ ನೀಡಿದರು.
ಈ ಸಂದರ್ಭ ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು, ಧಾರ್ಮಿಕ ಪರಿಷತ್ ಸದಸ್ಯ ಭುವನಾಭಿರಾಮ ಉಡುಪ, ಮಂದಿರದ ಅರ್ಚಕ ರಾಘವೇಂದ್ರ ರಾವ್ ಕೆರೆ ಕಾಡು, ಮಾಧವ ಶೆಟ್ಟಿಗಾರ್, ಸಂದೀಪ್ ಕೋಟ್ಯಾನ್, ಸುರೇಂದ್ರ ಶೆಟ್ಟಿಗಾರ್, ವಸಂತ ಶೆಟ್ಟಿಗಾರ್, ರಾಜೇಶ್ ಕೆರೆ ಕಾಡು ಮತ್ತಿತರರು ಉಪಸ್ಥಿತರಿದ್ದರು.
ಜೂನ್ 9ವರೆಗೆ ಕುಣಿತ ಭಜನೆ, ಸಾಕ್ಸೋಫೋನ್ ವಾದನ, ತಾಳಮದ್ದಲೆ, ಕೊಳಲು ವಾದನ, ಯಕ್ಷಗಾನ ಭರತನಾಟ್ಯ ನಡೆಯಲಿದ್ದು, ಜೂ.10ರಂದು ತಾಳಿಪಾಡಿ ಶ್ರೀ ಶನಿಕಥಾ ಸಂಕೀರ್ತನಾ ಮಂಡಳಿ ವತಿಯಿಂದ ಶನಿ ಕಥೆ ನಡೆಯಲಿದೆ.
Kshetra Samachara
05/07/2022 10:58 am