ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟೀಲು:"ಹಳೆ ತುಳುವಿನಿಂದ ಹೊಸ ತುಳುವಿಗೆ ಸಾಹಿತ್ಯದ ರೂಪಾಂತರದ ಅಗತ್ಯ"

ಕಟೀಲು : ಡ್ರಾವಿಡ ಭಾಷೆಗಳಲ್ಲಿ ತುಳುವಿಗೆ ಲಿಪಿ ಇಲ್ಲ ಅಂತ ಮಾತಿದ್ದ ಸಂದರ್ಭ ಶ್ರೀ ಭಾಗವತೊ, ಮಹಾಭಾರತ ಕೃತಿಗಳ ಮೂಲಕ ತುಳು ಸಾಹಿತ್ಯವೂ ಶ್ರೀಮಂತವಾಗಿತ್ತು. ತುಳುವಿಗೂ ಪ್ರಾಚೀನತೆ ಇದೆ, ತುಳುವಿನ ಕಾವ್ಯ ಪರಂಪರೆ ಗಮನೀಯವಾಗಿದೆ ಎಂಬುದನ್ನು ತೋರಿಸಿಕೊಟ್ಟ ಪುಂಡೂರು ವೆಂಕಟರಾಜ ಪುಣಿಂಚಿತ್ತಾಯರ ಕೊಡುಗೆ ಬಹುದೊಡ್ಡದು ಎಂದು ಹಿರಿಯ ವಿದ್ವಾಂಸ ಡಾ. ಪಾದೇಕಲ್ಲು ವಿಷ್ಣು ಭಟ್ ಹೇಳಿದರು.

ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನಲ್ಲಿ ಬೆಂಗಳೂರು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಸಹಯೋಗದಲ್ಲಿ ನಡೆದ ಒಂದು ದಿನದ ಭಾಷಾಂತರ ಕಮ್ಮಟದಲ್ಲಿ ಪಳಂತುಳು - ಹೊಸತುಳು ಮಹಾಭಾರತದ ಬಗ್ಗೆ ಉಪನ್ಯಾಸ ನೀಡಿದರು.

ತಲೆಗೆ ತುಳುವಿನಲ್ಲಿ ತರೆ, ಚರೆ, ಸರೆ, ಹರೆ, ಅರೆ ಇಷ್ಟೊಂದು ಬಗೆಯಲ್ಲಿ ಹೇಳಲಾಗುತ್ತದೆ. ಅಂದರೆ ಪದಗಳ ವೈವಿಧ್ಯ, ಕಾವೇರಿ ಮಾಹಾತ್ಮೆ, ದೇವೀ ಮಾಹಾತ್ಮೆ, ರಾಮಾಯಣಗಳಂತಹ ಶ್ರೀಮಂತ ಕೃತಿಗಳನ್ನು ಹಳೆ ಕನ್ನಡದಿಂದ ಹೊಸ ಕನ್ನಡಕ್ಕೆ ಮಾಡಿದಂತೆ ಹಳೆ ತುಳುವಿನಿಂದ ಹೊಸ ತುಳುವಿಗೆ ರೂಪಾಂತರ ಮಾಡುವ ಕೆಲಸ ಅಷ್ಟಾಗಿ ಆಗಿಲ್ಲ. ತುಳು ಭಾಷೆಯ ಸೊಗಡನ್ನು ಮಾತಾಡುವ ಓದುವ ಬರೆಯುವ ಮೂಲಕ ನಾವೆಲ್ಲರೂ ಸವಿಯಬೇಕಾಗಿದೆ ಎಂದು ಅವರು ಹೇಳಿದರು.

ಲೇಖಕಿ ಡಾ. ನಿಕೇತನ ತುಳು ಕನ್ನಡ ಮಂದಾರ ರಾಮಾಯಣದ ಬಗ್ಗೆ ಉಪನ್ಯಾಸ ನೀಡಿದರು. ಕಮ್ಮಟದ ಉದ್ಘಾಟನೆ ನೆರವೇರಿಸಿದ ಪ್ರಾಧಿಕಾರದ ಅಧ್ಯಕ್ಷ ಡಾ. ಅಜಕ್ಕಳ ಗಿರೀಶ್ ಭಟ್ ಮಾತನಾಡಿ, ನಾಡಿನಾದ್ಯಂತ ಪ್ರಾಧಿಕಾರದಿಂದ ಸಾಹಿತ್ಯವನ್ನು ಉಳಿಸಿ ಬೆಳೆಸುವ ಸದಾಶಯದಿಂದ ರಾಜ್ಯಾದ್ಯಂತ ಕಾರ‍್ಯಾಗಾರಗಳನ್ನು ನಡೆಸಲಾಗುತ್ತಿದ್ದು, ವಿದ್ಯಾರ್ಥಿಗಳನ್ನು ಗಮನವಿಟ್ಟುಕೊಂಡು ಇವನ್ನು ಆಯೋಜಿಸಲಾಗುತ್ತಿದೆ ಎಂದರು.

ದೇಗುಲದ ವಿಶೇಷ ಅಧಿಕಾರಿ ಮೋಹನ್ ರಾವ್ ಉಪಸ್ಥಿತರಿದ್ದರು. ಲಾವಣ್ಯ, ರಂಜನಾ ಪ್ರಾರ್ಥಿಸಿದರು. ಪ್ರಾಚಾರ‍್ಯ ಡಾ. ಕೃಷ್ಣ ಸ್ವಾಗತಿಸಿದರು. ಉಪನ್ಯಾಸಕಿ ಡಾ. ಸುನೀತಾ ವಂದಿಸಿದರು. ಉಪನ್ಯಾಸಕ ಸಂತೋಷ್ ಆಳ್ವ ನಿರೂಪಿಸಿದರು. ಕಟೀಲು ಅಲ್ಲದೆ, ಸುರತ್ಕಲ್ ಗೋವಿಂದದಾಸ, ಐಕಳ ಪಾಂಪೈ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Edited By : PublicNext Desk
Kshetra Samachara

Kshetra Samachara

02/07/2022 08:07 pm

Cinque Terre

2.33 K

Cinque Terre

0

ಸಂಬಂಧಿತ ಸುದ್ದಿ