ಮುಲ್ಕಿ: ಯುವಜನತೆಗೆ ಮಾರ್ಗದರ್ಶಿಯಾಗಿ ಧಾರ್ಮಿಕ, ಸಾಂಸ್ಕೃತಿಕ, ಸಾಹಿತ್ಯ ಹಾಗೂ ಕೃಷಿ ಕ್ಷೇತ್ರದ ಸಾಧಕರನ್ನು ಗುರುತಿಸುವ ಮೂಲಕ ತಿಂಗಳ ಬೆಳಕು ಕಾರ್ಯಕ್ರಮ ಕಳೆದ ಏಳು ವರ್ಷಗಳಿಂದ ಸಮಾಜದಲ್ಲಿ ಉತ್ತಮ ಹೆಜ್ಜೆ ಗುರುತು ಮೂಡಿಸಿದೆ ಎಂದು ಕಸಾಪ ಮಾಜೀ ಡಾ. ಹರಿಕೃಷ್ಣ ಪುನರೂರು ಹೇಳಿದರು.
ಮುಲ್ಕಿಯ ಹೊಸ ಅಂಗಣದ ತಿಂಗಳ ಬೆಳಕು ಕಾರ್ಯಕ್ರಮದಲ್ಲಿ ಹಿರಿಯ ಕೃಷಿಕ್ಷೇತ್ರದ ಸಾಧಕ ಶೇಖರ ಎಲ್.ಸಾಲ್ಯಾನ್ ರವರನ್ನು ಪತ್ನಿ ಶೋಭಾ ಸಾಲ್ಯಾನ್ ರವರೊಂದಿಗೆ ಸನ್ಮಾನಿಸಿ ಮಾತನಾಡಿದರು.
ನಿವೃತ್ತ ಮುಖ್ಯ ಶಿಕ್ಷಕ ನಿರ್ಮಲ್ ಕುಮಾರ್ ಹೆಗ್ಡೆ ಮಾತನಾಡಿ, ಸನ್ಮಾನವು ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿದ್ದು ಸಾಧನೆಯನ್ನು ಸಮಾಜಕ್ಕೆ ಪರಿಚಯಿಸುವ ಮೂಲಕ ಯುವ ಜನತೆಗೆ ಮಾರ್ಗದರ್ಶಿಯಾಗಲು ಸಾಧ್ಯ ಎಂದರು.
ಸಮಾರಂಭದ ಮುಖ್ಯ ಅತಿಥಿಯಾಗಿ ವಿಜಯಾ ಕಾಲೇಜು ನಿವೃತ್ತ ಪ್ರಾಂಶುಪಾಲ ಪ್ರೊ. ಮೇಜರ್ ಸ್ಯಾಮ್ ಮಾಬೆನ್, ಹಾಸನ ಜಿಲ್ಲಾ ಸಾಹಿತ್ಯ ಪರಿಷತ್ ಮಾಜೀ ಅಧ್ಯಕ್ಷ ಉದಯ ರವಿ, ಪತ್ರಕರ್ತ ಶೇಖರ ಅಜೆಕಾರು, ಸಾಹಿತಿ ಡಾ.ಹರಿಶ್ಚಂದ್ರ ಪಿ.ಸಾಲ್ಯಾನ್, ವಾಸು ಪೂಜಾರಿ ಚಿತ್ರಾಪು, ರಮೇಶ್ ಅಮೀನ್ ಕೊಕ್ಕರಕಲ್,ಜೋನ್ ಕ್ವಾಡ್ರಸ್, ರವೀಂದ್ರ ಶೆಟ್ಟಿ,ವಿಜಯ ಕುಮಾರ್ ಕುಬೆವೂರು, ವಾಮನ ನಡಿಕುದ್ರು, ಡಾ.ಹರಿಶ್ಚಂದ್ರ.ಪಿ.ಸಾಲ್ಯಾನ್, ರೊ. ರವಿಚಂದ್ರ, ಅಚ್ಯುತ ಆಚಾರ್ಯ ಉಪಸ್ಥಿತರಿದ್ದರು.
Kshetra Samachara
30/06/2022 12:08 pm