ಮಂಗಳೂರು: ನಗರದ ಹೊರವಲಯದ ಮಂಗಳಾದೇವಿ ಬಳಿ ಕುಲಾಲ ಭವನದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಮುಂಬಯಿ ಕುಲಾಲ ಸಂಘದ ವತಿಯಿಂದ ಉಡುಪಿ ದೊಡ್ಡಣಗುಡ್ಡೆಯ ಶ್ರೀ ಆದಿಶಕ್ತಿ ದೇವಸ್ಥಾನದ ಧರ್ಮದರ್ಶಿ ರಮಾನಂದ ಗುರೂಜಿ ಯವರನ್ನು ಗೌರವಿಸಲಾಯಿತು.
ಗೌರವನ್ನು ಸ್ವೀಕರಿಸಿದ ಗುರೂಜಿ ಆಶೀರ್ವಚನ ನೀಡಿ ಧರ್ಮ ಚಿಂತನೆಗಳ ಕಾರ್ಯಗಳು ಪ್ರತಿ ಮನೆ ಮನೆಯಲ್ಲಿ ನಡೆಯುವಂತಾಗಬೇಕು. ಕುಲಾಲ ಭವನದಲ್ಲಿ ನಡೆದ ಧಾರ್ಮಿಕ ಕಾರ್ಯಗಳಿಂದಾಗಿ ಮುಂಬಯಿ ಮತ್ತು ಜಿಲ್ಲೆಯ ಕುಲಾಲ ಸಮಾಜದ ಬಂಧುಗಳು ಒಗ್ಗಟ್ಟು ಬಲಿಷ್ಠವಾಗಿದೆ ಮುಂದಿನ ದಿನಗಳಲ್ಲಿ ಕಟ್ಟಡ ಪೂರ್ಣಗೊಂಡು ಸಮಾಜಕ್ಕೆ ಲೋಕಾರ್ಪಣೆಗೊಳ್ಳಲಿದೆ ಎಂದರು.
ಮುಂಬೈ ಕುಲಾಲ ಸಂಘದ ಅಧ್ಯಕ್ಷ ದೇವದಾಸ್ ಕುಲಾಲ್ ಮಾತನಾಡಿದರು. ಕಾರ್ಯಕ್ರಮದಲ್ಲಿ ದೊಡ್ಡಣಗುಡ್ಡೆ ಶ್ರೀ ಆದಿಶಕ್ತಿ ದೇವಸ್ಥಾನದ ಆಡಳಿತ ಉಸ್ತುವಾರಿ ಕುಸುಮ ನಾಗರಾಜ್ ಮುಂಬಯಿ ಕುಲಾಲ ಸಂಘದ ಮಾಜಿ ಅಧ್ಯಕ್ಷ ಗಿರೀಶ್ ಬಿ ಸಾಲಿಯಾನ್. ಉಪಾಧ್ಯಕ್ಷ ರಘು ಮೂಲ್ಯ ಪಾದೆಬೆಟ್ಟು ಗೌರವ ಪ್ರದಾನ ಕಾರ್ಯದರ್ಶಿ ಕರುಣಾಕರ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
ಪತ್ರಕರ್ತ ದಿನೇಶ್ ಕುಲಾಲ್ ನಿರೂಪಿಸಿದರು.ಕರುಣಾಕರ ಸಾಲ್ಯಾನ್ ವಂದಿಸಿದರು.
Kshetra Samachara
28/06/2022 12:39 pm