ಮಡಂತ್ಯಾರು:ಮುಸ್ಲಿಮರ ಮಸೀದಿಗಳು ನಾಡಿನ ಎಲ್ಲಾ ವರ್ಗದ ಜನತೆಯೊಂದಿಗೆ ಶಾಂತಿ ಮತ್ತು ಸೌಹಾರ್ಧತೆ ಯನ್ನು ಪ್ರೋತ್ಸಾಹಿಸುವ ಕೇಂದ್ರಗಳಾಗಿದ್ದು ಅದು ದೇವೋಪಾಸನೆಗೆ ಮೀಸಲಾಗಿದೆ.ಅದರ ಗೌರವಕ್ಕೆ ಚ್ಯುತಿ ಉಂಟಾಗುವ ಯಾವುದೇ ವರ್ತನೆಯನ್ನು ಅಲ್ಲಾಹನು ಮೆಚ್ಚುವುದಿಲ್ಲ.ಮಸೀದಿಯ ಆಡಳಿತಗಾರರು ಸ್ವಾರ್ಥ,ಅಹಂಕಾರ,ದರ್ಪ,ಸ್ವಜನ ಪಕ್ಷಪಾತ,ಅವ್ಯವಹಾರಗಳಿಂದ ಮುಕ್ತರಾಗಿರಬೇಕು.
ಅಧಿಕಾರ ಕೇಳಿ ಪಡೆದು ಕೊಳ್ಳುವುದು ,ಅದಕ್ಕಾಗಿ ಲಾಭಿ ಮಾಡುವುದು ಯಾವತ್ತೂ ಸಲ್ಲದು ಎಂದು ಜಂಇಯ್ಯತ್ತುಲ್ ಖುತಬಾ ಜಿಲ್ಲಾದ್ಯಕ್ಷರಾದ ಹಾಜಿ ಎಸ್ ಬಿ ದಾರಿಮಿ ಹೇಳಿದರು.
ಅವರು ಬೆಳ್ತಂಗಡಿ ತಾಲೂಕಿನ ಮಡಂತ್ಯಾರು ದೂಮಳಿಕೆ ಬಿಸ್ಮಿಲ್ಲಾ ಮಸೀದಿಯ ಮಹಾಸಭೆಯ ಅದ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಭೆಯಲ್ಲಿ ಸ್ಥಳೀಯ ಖತೀಬ್ ಆದಂ ಉಸ್ತಾದ್ ದುಹಾ ನೆರವೇರಿಸಿದರು.ನಿಕಟಪೂರ್ವ ಅದ್ಯಕ್ಷ ದೂಮಳಿಕೆ ಹನೀಪ್ ಮತ್ತು ತಂಡ ಕಳೆದ ಆಡಳಿತ ವರ್ಷದಲ್ಲಿ ನಡೆಸಿದ ಅಭಿವೃದ್ದಿ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತವಾಯಿತು.
ಮುಂದಿನ ಗೌರವದ್ಯಕ್ಷರಾಗಿ ಎಸ್ ಬಿ ಉಸ್ತಾದರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ನೂತನ ಪಧಾದಿಕಾರಿಗಳಾಗಿ ಅಬುಸಾಲಿ ಅದ್ಯಕ್ಷ, ರಿಯಾಝ್ ದಾರಿಮಿ ಉಪಾಧ್ಯಕ್ಷ, ಇರ್ಪಾನ್ ಕಾರ್ಯದರ್ಶಿ, ಆರಿಪ್ ಜೊತೆಕಾರ್ಯದರ್ಶಿ ಹಾಗೂ ಅಶ್ರಪ್ ರನ್ನು ಕೋಶಾಧಿಕಾರಿಯನ್ನಾಗಿ ಆಯ್ಕೆ ಮಾಡಲಾಯಿತು.ಉಳಿದಂತೆ ಹಂಝ,ಮುಹಮ್ಮದ್,ಹಸೈನಾರ್,ಹೈದರ್ ,ಸಾದಿಕ್,ಲತೀಪ್ ರನ್ನು ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.
Kshetra Samachara
27/06/2022 07:01 am