ಮುಲ್ಕಿ: ಮುಲ್ಕಿ ರೋಟರಿ ಕ್ಲಬ್ಬಿನ ರಜತ ಮಹೋತ್ಸವ ಸಂಭ್ರಮ ಹಾಗೂ ಸಾಧಕರಿಗೆ ಗೌರವ ಸಹಿತ ವಿಧ ವಿವಿಧ ಕಾರ್ಯಕ್ರಮಗಳು ಬಪ್ಪನಾಡು ದೇವಳದ ಜ್ಞಾನ ಮಂದಿರದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಲ್ಕಿ ರೋಟರಿ ಕ್ಲಬ್ ಅಧ್ಯಕ್ಷ ಶಿವರಾಮ್ ಜಿ ಅಮೀನ್ ವಹಿಸಿದ್ದರು ಕಾರ್ಯಕ್ರಮವನ್ನು ಶಾಸಕ ಉಮಾನಾಥ ಕೋಟ್ಯಾನ್ ಉದ್ಘಾಟಿಸಿ ಶುಭಹಾರೈಸಿದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು, ಮುಲ್ಕಿ ನಪಂ ಅಧ್ಯಕ್ಷ ಸುಭಾಷ್ ಶೆಟ್ಟಿ, ಭಾರತ್ ಕೋಪರೇಟಿವ್ ಬ್ಯಾಂಕ್ ನಿರ್ದೇಶಕ ಸೂರ್ಯಕಾಂತ್ ಜಯ ಸುವರ್ಣ, ಬಪ್ಪನಾಡು ದೇವಸ್ಥಾನದ ಆಡಳಿತ ಮೊಕ್ತೇಸರ ಮನೋಹರ ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ ಪ್ರವೀಣ್, ಉಪರಾಜ್ಯಪಾಲ ರೊ.ಅರುಣ್ ಭಂಡಾರಿ, ರೋಟರಿಕ್ಲಬ್ ಪದಾಧಿಕಾರಿಗಳಾದ ಅಶೋಕ್ ಕುಮಾರ್ ಶೆಟ್ಟಿ, ರವಿಚಂದ್ರ, ಜಿನರಾಜ ಸಿ ಸಾಲ್ಯಾನ್, ಲಿಯಾಕತ್ ಆಲಿ,ಎಂ. ನಾರಾಯಣ, ಜೋವಿನ್ ಪ್ರಕಾಶ್ ಡಿಸೋಜಾ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮುಲ್ಕಿ ರೋಟರಿ ರಜತ ಮಹೋತ್ಸವದ ಸ್ಮರಣ ಸಂಚಿಕೆ ಬಿಡುಗಡೆ,ಮಂಗಳೂರು ವಿ ವಿ ಗೌರವ ಡಾಕ್ಟರೇಟ್ ಪಡೆದಿರುವ ಡಾ.ಹರಿಕೃಷ್ಣ ಪುನರೂರು,ಚಿಲ್ದ್ರನ್ ಪಾರ್ಕ್‌ನ ಪ್ರಾಯೋಜಕ ಸೂರ್ಯಕಾಂತ್ ಜೆ ಸುವರ್ಣ,ತುಳು ಚಿತ್ರ ನಟ ಭೋಜರಾಜ್ ವಾಮಂಜೂರುರನ್ನು ಸನ್ಮಾನಿಸಲಾಯಿತು ಹಾಗೂ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವ ಕಿಲ್ಪಾಡಿ ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠ ಶಾಲೆಯ ವಿದ್ಯಾರ್ಥಿಗಳಾದ ಅಕ್ಷತಾ ಕಾಮತ್,ವೀಕ್ಷಾ ವಿ ಶೆಟ್ಟಿ ಮತ್ತು ವಿಷ್ಣು ಎಚ್ ರನ್ನು ಗೌರವಿಸಲಾಯಿತು.
ರಜತ ಮಹೋತ್ಸವದ ಅಂಗವಾಗಿ ಸುಮಾರು 5 ಲಕ್ಷ ವೆಚ್ಚದಲ್ಲಿ ದಾನಿಗಳ ಸಹಕಾರದಿಂದ ಬಪ್ಪನಾಡು ದೇವಳದ ಬಳಿ ನಿರ್ಮಿಸಲಾದ ಜಯ ಸಿ ಸುವರ್ಣ ಸ್ಮಾರಕ ರೋಟರಿ ಚಿಲ್ದ್ರನ್ ಪಾರ್ಕ್‌ನ ಉದ್ಘಾಟನೆ ಹಾಗೂ ಇಂಟರಾಕ್ಟ್ ಕ್ಲಬ್ ಗಳ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯಿತು.ರೊ.ವೈ ಎನ್ ಸಾಲ್ಯಾನ್ ರಾಜಪತ್ರಾವೋ ನಿರೂಪಿಸಿದರು.
Kshetra Samachara
26/06/2022 07:25 pm