ಮುಲ್ಕಿ: ಕಿನ್ನಿಗೋಳಿ ಲಿಟ್ಲ್ ಫ್ಲವರ್ ಪ್ರೌಢಶಾಲೆ ಶಿಕ್ಷಕ ರಕ್ಷಕ ಸಂಘದ ವತಿಯಿಂದ ಶಾಲೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಾದ ಹಂಸಿಕ,ರಿಯಾನ,ಪ್ರಜ್ವಲ್, ಶೆ`ಲಾ,ನಮನ್,ಶ್ರೆಯಾರವರನ್ನು ಸನ್ಮಾನಿಸಲಾಯಿತು.
ಹಾಗೂ ಹೊಸ ಕಾರ್ಯಕಾರಿ ಸಮಿತಿಯ 30 ಸದಸ್ಯರನ್ನು ಗೌರವಿಸಲಾಯಿತು. ಡಾ| ಲಿಲ್ಲಿ ಪಿರೇರಾ ಅಧ್ಯಕ್ಷತೆಯನ್ನು ವಹಿಸಿದ್ದರು ಸಂಪನ್ಮೂಲ ವ್ಯಕ್ತಿಗಳಾದ ಭಗಿನಿ ಸೇವ್ರಿನ್,ಭಗಿನಿ ಪ್ರೇಮಲತಾ, ಶಾಲಾ ಮುಖ್ಯೋಪಾಧ್ಯಾಯಿನಿ ಭಗಿನಿ ಲೀಝ ,ನೂತನ ಉಪಾಧ್ಯಕ್ಷ ಲಾಯ್ಡ್ ಡಿಸೋಜಾ, ನಿರ್ಗಮನ ಉಪಾಧ್ಯಕ್ಷೆ ಗ್ರೆಟ್ಟಾ ಡಿಸೋಜಾ ಉಪಸ್ಥಿತರಿದ್ದರು.
ಶಿಕ್ಷಕಿ ಜಾಲಿ ಬ್ರಾಗ್ಸ್ ಸ್ವಾಗತಿಸಿದರು. ಶಿಕ್ಷಕ ಆಲ್ವಿನ್ ರೊಡ್ರಿಗಸ್ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ಹಿಲರಿ ಮಸ್ಕರೇನಸ್ ಕಾರ್ಯಕ್ರಮ ನಿರೂಪಿಸಿದರು.
Kshetra Samachara
25/06/2022 09:56 pm