ಮುಲ್ಕಿ:ತಮಿಳುನಾಡು ಮುಖ್ಯಮಂತ್ರಿಯವರಿಂದ "ನಾದಸ್ವರ ಸೆಲ್ವಂ" ಪ್ರಶಸ್ತಿ ಪಡೆದ ಖ್ಯಾತ ನಾಗಸ್ವರ ವಾದಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ನಾಗೇಶ್ ಬಪ್ಪನಾಡು ರವರನ್ನು ಮುಲ್ಕಿ ಒಂಬತ್ತು ಮಾಗಣೆಯ ಸೀಮೆ ಅರಸರಾದ ದುಗ್ಗಣ್ಣ ಸಾವಂತರು ಸೀಮೆಯ ವತಿಯಿಂದ ಗೌರವಿಸಿದರು.
ಈ ಸಂದರ್ಭ ಅವರು ಮಾತನಾಡಿ ಕಲೆಗೆ ಅಭಿಮಾನಿಗಳ ಪ್ರೋತ್ಸಾಹ ಶ್ಲಾಘನೀಯವಾಗಿದ್ದು, ಕಲೆಯನ್ನು ಗುರುತಿಸಿ ಗೌರವಿಸಿದ ಸಂಘಟನೆ ಹಾಗೂ ಸಂಬಂಧಪಟ್ಟ ಆಡಳಿತದ ಕಾರ್ಯವೈಖರಿ ಅಭಿನಂದನೀಯ ಎಂದರು.
ಈ ಸಂದರ್ಭ ಆಶಾಲತಾ, ಗೌತಮ್ ಜೈನ್ ಮುಲ್ಕಿ ಅರಮನೆ, ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅಕೌಂಟೆಂಟ್ ಶಿವಶಂಕರ್ ಹಾಗೂ ಅರಮನೆ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಗೌತಮ್ ಜೈನ್ ಸ್ವಾಗತಿಸಿ ನಿರೂಪಿಸಿದರು.
Kshetra Samachara
15/06/2022 11:29 am