ಮುಲ್ಕಿ:ವಿಜಯಕಾಲೇಜು, ಮುಲ್ಕಿ ಎನ್.ಸಿ.ಸಿ. ಘಟಕ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕ ಜಂಟಿ ಆಶ್ರಯದಲ್ಲಿ ವನಮಹೋತ್ಸವ ಕಾರ್ಯಕ್ರಮ ಕಾಲೇಜಿನ ಆವರಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಗಿ 18 ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ.ಘಟಕ ಮಂಗಳೂರು ನ ಅಧಿಕಾರಿಗಳಾದ ಸಿ,ಹೆಚ್ ಎಂ ಬಲರಾಮ್‌ದಾಸ್ ಮಾತನಾಡಿ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು ಶಾಶ್ವತವಾಗಿ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದರು.
ಹವಾಲ್ದಾರ್ ಎಂ ಸೆಂತಿಲ್, ಎನ್.ಸಿ.ಸಿ. ಅಧಿಕಾರಿ ಲೆ. ರಾಜೇಶ್ ಶೆಟ್ಟಿಗಾರ್, ಎನ್.ಎಸ್.ಎಸ್. ಅಧಿಕಾರಿ ನಾಗರಾಜರಾವ್ ಹಾಗೂ ಎನ್.ಸಿ.ಸಿ. ಹಾಗೂ ಎನ್.ಎಸ್.ಎಸ್. ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Kshetra Samachara
07/06/2022 07:51 pm