ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾಗಿದ್ದುಕೊಂಡು, ತುಳು ಸಂಘಟನೆ, ಸಮಾಜ ಸೇವೆ, ಸಾಂಸ್ಕೃತಿಕವಾಗಿ ಹಾಗೂ ಯಶಸ್ವಿ ಉದ್ಯಮಿಯಾಗಿ ಗುರುತಿಸಿ ಆದರ್ಶ ವ್ಯಕ್ತಿತ್ವದಿಂದ ಪ್ರೇರಣಾ ವ್ಯಕ್ತಿಯಾಗಿ ನಮ್ಮೆಲ್ಲರೊಂದಿಗೆ ಒಡನಾಡಿಯಾಗಿದ್ದ ಅವರ ಜೀವನದ ಸಾಧನೆಯೊಂದಿಗೆ ಅನುಭವವು ಬರಹದ ಮೂಲಕ ಮುಂದಿನ ಪೀಳಿಗೆಗೆ ದಾರಿದೀಪವಾಗಿ ದಾಖಲೀಕರಣಗೊಳ್ಳಬೇಕು ಎಂದು ಮಂಗಳೂರು ವಿಶ್ವವಿದ್ಯಾನಿಲಯ ರಿಜಿಸ್ಟ್ರಾರ್ ಡಾ. ಧರ್ಮ ಹೇಳಿದರು.
ಅವರು ಮಂಗಳೂರಿನ ಉರ್ವ ಸ್ಟೋರ್‌ನ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಿರಿ ಚಾವಡಿಯಲ್ಲಿ ನಡೆದ ಅಕಾಡೆಮಿಯ ಸದಸ್ಯ ನಿಟ್ಟೆ ಶಶಿಧರ ಶೆಟ್ಟಿ ಅವರ ನುಡಿ ನಮನ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.
ಸಭೆಯಲ್ಲಿ ನುಡಿ ನಮನವನ್ನುಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ್ ದೇವಾಡಿಗ, ಲಯನ್ಸ್ ಜಿಲ್ಲಾ ಗವರ್ನರ್ ವಸಂತಕುಮಾರ್ ಶೆಟ್ಟಿ, ತುಳು ಒಕ್ಕೂಟದ ಅಧ್ಯಕ್ಷ ದಾಮೋದರ ನಿಸರ್ಗ, ಅಕಾಡೆಮಿಯ ಮಾಜಿ ಅಧ್ಯಕ್ಷ ಎ.ಸಿ.ಭಂಡಾರಿ, ಟೈಮ್ಸ್ ಆಫ್ ಕುಡ್ಲ ಪತ್ರಿಕೆಯ ಸಂಪಾದಕ ಎಸ್.ಆರ್.ಬಂಡಿಮಾರ್, ತುಳು ರಕ್ಷಣಾ ವೇದಿಕೆಯ ಅಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು, ಸಂಸ್ಕಾರ
ಅಧ್ಯಕ್ಷ ಎ.ಸಿ.ಭಂಡಾರಿ, ಟೈಮ್ಸ್ ಆಫ್ ಕುಡ್ಲ ಪತ್ರಿಕೆಯ ಸಂಪಾದಕ ಎಸ್.ಆರ್.ಬಂಡಿಮಾರ್, ತುಳು ರಕ್ಷಣಾ ವೇದಿಕೆಯ ಅಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು, ಸಂಸ್ಕಾರ ಭಾರತಿಯ ರಾಜ್ಯ ಪ್ರಭಾರಿ ಚಂದ್ರಶೇಖರ ಶೆಟ್ಟಿ, ಪದವಿನಂಗಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಪ್ರಶಾಂತ್ ಪೈ, ತುಳು ಕಲಾವಿದರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್‌ಕುಮಾ ಮಲ್ಲೂರು, ಮಂಗಳೂರು ಲಯನ್ಸ್ ಕ್ಲಬ್ ಅಧ್ಯಕ್ಷ ಸತೀಶ್ ರೈ, ಅಕಾಡೆಮಿಯ ಸದಸ್ಯರಾದ ಡಾ. ಆಕಾಶ್ ರಾಜ್ ಜೈನ್, ನಾಗೇಶ್ ಕುಲಾಲ್, ಶಶಿಧರ ಶೆಟ್ಟಿ ,ಪುತ್ರಿ ಶ್ರಾವ್ಯ ಮಾತನಾಡಿದರು.
ಅಕಾಡೆಮಿಯ ಸದಸ್ಯರಾದ ಲೀಲಾಕ್ಷ ಕರ್ಕೇರ, ರಿಜಿಸ್ಟ್ರಾರರ್ ಕವಿತಾ, ಮುಲ್ಕಿ ವಿಜಯಾ ಕಾಲೇಜಿನ ಆಡಳಿತ ಮಂಡಳಿಯ ಮಾಜಿ ಅಧ್ಯಕ್ಷೆ ಶಮಿನಾ ಆಳ್ವಾ, ಮಂಗಳೂರು ಲಯನ್ಸ್ ಕ್ಲಬ್‌ನ ಕಾರ್ಯದರ್ಶಿ ಸುಪ್ರೀತಾ ಜಿ. ಶೆಟ್ಟಿ, ಉಪಾಧ್ಯಕ್ಷ ಗುರುಪ್ರಸಾದ್ ಆಳ್ವಾ, ಯಕ್ಷಗಾನ ಸಂಘಟಕ ರವಿ ಅಲೆವೂರಾಯ, ಹಿರಿಯ ಸಾಹಿತಿ ಮುದ್ದು ಮೂಡುಬೆಳ್ಳೆ, ಡಾ. ರವೀಶ್ ಪರವ, ಜಾರ್ಜ್, ಮೊಯ್ದನ್ ಕುಂಜ್ಞ, ಯುವ ತುಳು ಸಂಘಟನೆಯ ರೋಶನ್, ಜೈ ತುಳುನಾಡು ಸಂಘಟನೆಯ ಪ್ರಮುಖರು, ಮತ್ತಿತರರು ಉಪಸ್ತಿತರಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಜಿ. ಕತ್ತಲ್‌ಸಾರ್ ಪ್ರಸ್ತಾವನೆಗೈದರು.
Kshetra Samachara
06/06/2022 08:06 am