ಮುಲ್ಕಿ: ಹಳೆಯಂಗಡಿ ಸಮೀಪದ ಸಸಿಹಿತ್ಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಮಕ್ಕಳಿಗೆ ಎರಡು ದಿನಗಳ ನಾಟಕ ತರಬೇತಿ ಕಾರ್ಯಾಗಾರ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಸಿಹಿತ್ಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಕ್ಲೊಟಿಲ್ಡಾ ಲೋಬೊ ವಹಿಸಿ ಮಾತನಾಡಿ ಜೀವನದಲ್ಲಿ ವಿದ್ಯೆಯ ಜೊತೆಗೆ ವಿವಿಧ ಚಟುವಟಿಕೆಗಳಿಗೆ ಪ್ರೋತ್ಸಾಹ ಅಗತ್ಯವಿದೆ ನಾಟಕ ಸಹಿತ ವಿವಿಧ ಕಲೆಗಳನ್ನು ಅರಗಿಸಿಕೊಳ್ಳುವ ಮೂಲಕ ಸಕಲಕಲಾವಲ್ಲಭರಾಗಿ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ವಿಜಯ ಕರ್ನಾಟಕ ಪತ್ರಿಕೆಯ ವರದಿಗಾರ ಹರೀಶ್ ಹೆಜ್ಮಾಡಿ ಮಾತನಾಡಿ ಮಕ್ಕಳಿಗೆ ಸಾಂಸ್ಕೃತಿಕ ರಂಗದಲ್ಲಿ ಅಭಿರುಚಿ ಶ್ಲಾಘನೀಯವಾಗಿದ್ದು ಕಲೆಯನ್ನು ಆರಾಧಿಸಿ ಉತ್ತಮ ಕಲಾವಿದರಾಗಿ ಎಂದರು.
ಟೈಮ್ಸ್ ಆಫ್ ಕುಡ್ಲ ಪತ್ರಿಕೆಯ ಸಹಸಂಪಾದಕ ಯಶೋಧರ ಕೋಟ್ಯಾನ್ ,ಸಂಯೋಜಕರಾದ ಉಪನ್ಯಾಸಕ ಪ್ರೊ. ಜಾಯ್ಸನ್,ವಿದ್ಯಾರ್ಥಿ ಸಂಯೋಜಕರ ಶ್ರೇಯಸ್ ಶೆಣೈ,ಅನ್ಯ ರೈ, ಉಪಸ್ಥಿತರಿದ್ದರು.
ಬಿಎಸ್ ಡಬ್ಲ್ಯೂ ನ ಪ್ರಜ್ಞಾ ಸ್ವಾಗತಿಸಿದರು.ಶ್ರೇಯಸ್ ಶೆಣೈ ನಿರೂಪಿಸಿದರು.
Kshetra Samachara
01/06/2022 03:06 pm