ಮುಲ್ಕಿ: ಕಿನ್ನಿಗೋಳಿ ಲಯನ್ಸ್ ಕ್ಲಬ್ ವತಿಯಿಂದ ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಶಾಂತಿಪಲ್ಕೆಯ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಉಚಿತವಾಗಿ ರೈನ್ ಕೋಟ್, ಪುಸ್ತಕವನ್ನು ಲಯನ್ಸ್ ಕ್ಲಬ್ ಅಧ್ಯಕ್ಷೆ ಹಿಲ್ಡಾ ಡಿಸೋಜ ವಿತರಿಸಿದರು.
ಈ ಸಂದರ್ಭದಲ್ಲಿ ಮ್ಯಾಕ್ಸಿಮ್ ಪಿಂಟೋ,ಸುಧಾಕರ ಶೆಟ್ಟಿ, ಕಿನ್ನಿಗೋಳಿ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಸಂತಾನ್ ಡಿಸೋಜ, ಸಂತೋಷ್ ಕುಮಾರ್,ರಿಚ್ಚರ್ಡ್ ಪಿಂಟೋ,ಆಶಾ ಕಾರ್ಯಕರ್ತೆ ಶರ್ಮೀಳಾ, ಅಂಗನವಾಡಿ ಕಾರ್ಯಕರ್ತೆ ಪ್ರೇಮಾ, ಸಹಾಯಕಿ ಪುಪ್ಪಾ, ಮಕ್ಕಳ ಹೆತ್ತವರು ಹಾಗೂ ಅಂಗನವಾಡಿ ಮಕ್ಕಳು ಉಪಸ್ಥಿತರಿದ್ದರು. ಸಂತೋಷ್ ಕುಮಾರ್ ನಿರೂಪಿಸಿ ಸ್ವಾಗತಿಸಿ, ಪ್ರೇಮ ಧನ್ಯವಾದ ಅರ್ಪಿಸಿದರು.
Kshetra Samachara
31/05/2022 11:20 am