ಮುಲ್ಕಿ: ಗ್ರಾಮೀಣ ಪ್ರದೇಶದಲ್ಲಿರುವ ಹಾಲು ಉತ್ಪಾದಕರ ಸಹಕಾರಿ ಸಂಘಗಳು ಗ್ರಾಮದ ಜನರ ವರದಾನವಾಗಿದೆ. ಸಂಘದಿಂದ ದೊರೆಯವ ಸೌಲಭ್ಯವನ್ನು ಪಡೆದುಕೊಂಡು ಅರ್ಥಿಕವಾಗಿ ಸದೃಡರಾಗಿ ಎಂದು ದ. ಕ. ಹಾಲು ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ ಹೇಳಿದರು.
ಅವರು ಕೆಂಚನಕೆರೆಯಲ್ಲಿ ಕಿಲ್ಪಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ವಾರ್ಷಿಕ ಸಾಮಾನ್ಯ ಸಭೆ , ಮಾಹಿತಿ ಕಾರ್ಯಗಾರ , ಪ್ರತಿಭಾ ಪುರಸ್ಕಾರ , ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ದ. ಕ. ಹಾಲು ಒಕ್ಕೂಟದ ಉಪವ್ಯವಸ್ಥಾನಕ ಡಾ| ಶ್ರೀನಿವಾಸ ಮಾಹಿತಿ ನೀಡಿ ಮಾತನಾಡಿ ಆಧುನಿಕತೆಯ ಕಾಲ ಘಟ್ಟದಲ್ಲಿ ಹೈನುಗಾರಿಕೆ ಲಾಭಾದಾಯಕವಾಗಿದ್ದು ಹೈನುಗಾರರಿಗೆ ಸರಿಯಾದ ಮಾಹಿತಿ ಹಾಗೂ ತರಬೇತಿ ಅಗತ್ಯವಿದೆ ಈ ನಿಟ್ಟಿನಲ್ಲಿ ಒಕ್ಕೂಟದಿಂದ ಸಹಕಾರ ಇದೆ ಎಂದು ಹೇಳಿದರಲ್ಲದೆ ಮಾಹಿತಿ ನೀಡಿ ಗುಣಮಟ್ಟದ ಹಾಲು ಉತ್ಪಾದನೆ , ಜಾನುವಾರುಗಳಿಗೆ ಬರುವ ರೋಗಗಳು ಮತ್ತು ಚಿಕಿತ್ಸಾ ವಿಧಾನ ಬಗ್ಗೆ ವಿಸೃತ್ತವಾದ ಮಾಹಿತಿ ನೀಡಿದರು.
ಸಂಘದ ಅಧ್ಯಕ್ಷ ಕೆನ್ಯುಟ್ ಆರಾಹ್ನ ಅಧ್ಯಕ್ಷತೆವಹಿಸಿದ್ದರು. ಇದೇ ಸಂದರ್ಭದಲ್ಲಿ ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ , ಪ್ರತಿಭಾ ಪುರಸ್ಕಾರಡಿಯಲ್ಲಿ ಸಾಧಕ ವಿದ್ಯಾರ್ಥಿಗಳಾದ ತೃಷಾ, ಪೂರ್ವಿ, ಮಹಮ್ಮಾಯಿ ರವರನ್ನು ಗೌರವಿಸಲಾಯಿತು. ನಿರ್ದೇಶಕರಾದ ಪ್ರವೀಣ್, ಗಂಗಾಧರ ಶೆಟ್ಟಿ , ಬಾಲಕೃಷ್ಣ ಶೆಟ್ಟಿ , ವಾಲ್ಟರ್ ಫೆರಾವೊ, ಮೋಹಾನಂದ ಶೆಟ್ಟಿ , ಬಿ. ಕೃಷ್ಣ ರಾವ್, ಎಸ್. ರಾಜೇಶ್, ರೇವತಿ ಎಸ್, ಸರೋಜಿನಿ ಎಸ್, ಲೀಲಾ ಸಿ ಉಪಸ್ಥಿತರಿದ್ದರು. ಉಪಾಧ್ಯಕ್ಷ ಮುರಳೀಧರ ಭಂಡಾರಿ ಸ್ವಾಗತಿಸಿದರು. ಕಾರ್ಯದರ್ಶಿ ಮಾಧುರಿ ಶೆಟ್ಟಿ ವಂದಿಸಿದರು. ಒಕ್ಕೂಟದ ವಿಸ್ತರಣಾಧಿಕಾರಿ ಸರೋಜಿನಿ ಕಾರ್ಯಕ್ರಮ ನಿರೂಪಿಸಿದರು.
Kshetra Samachara
27/05/2022 06:29 pm