ಮುಲ್ಕಿ: ಮುಲ್ಕಿ ಟೂರಿಸ್ಟ್ ಕಾರು ಚಾಲಕ ಮಾಲಕರ ಸಂಘ(ರಿ)ದ ವತಿಯಿಂದ ಸಂಘದ ಸದಸ್ಯರಾದ ವೇದಾನಂದ ಶೆಟ್ಟಿ -ವೀಣಾ ವಿ ಶೆಟ್ಟಿರವರ ಪುತ್ರಿ ವೀಕ್ಷಾ ವಿ ಶೆಟ್ಟಿ ಯವರು ಮುಲ್ಕಿಯ ವ್ಯಾಸಮಹರ್ಷಿ ವಿದ್ಯಾಪೀಠದಲ್ಲಿ ಪ್ರತಿಭಾವಂತ ವಿದ್ಯಾರ್ಥಿನಿಯಾಗಿ 2021 -22 ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಟಾಪರ್ 625/625 ಸ್ಥಾನಗಳಿಸಿದ್ದು ಮುಲ್ಕಿ ಟೂರಿಸ್ಟ್ ಹೋಮ್ ಸಭಾಂಗಣದಲ್ಲಿ ನಡೆದ ಸಾಧಕರ ಅಭಿನಂದನಾ ಸಮಾರಂಭದಲ್ಲಿ ಅವರನ್ನು ಗೌರವಿಸಲಾಯಿತು.
ಈ ಸಂದರ್ಭ ಸಂಘದ ಗೌರವಾಧ್ಯಕ್ಷ ಮಧು ಆಚಾರ್ಯ ಮಾತನಾಡಿ ಓರ್ವ ಕಾರು ಚಾಲಕನ ಪುತ್ರಿಯಾಗಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಅಭಿನಂದನೀಯವಾಗಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಸಾಧನೆಗಳು ನಿರಂತರವಾಗಿರಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭ ಸಂಘದ ಪ್ರಧಾನ ಕಾರ್ಯದರ್ಶಿ ದೇವಣ್ಣ ನಾಯಕ್, ಉಪಾಧ್ಯಕ್ಷ ಲತೀಶ್ ಎಂ ಕುಂದರ್, ಸದಸ್ಯರಾದ ಎಂ. ಎ. ಅಸಾದಿ, ಮೋಹನ್ ಶೆಟ್ಟಿ, ಅಲೆನ್ ಲಿವಿಂಗ್ ಸ್ಟನ್, ಜಗದೀಶ್ ಅದಮಾರು,ಪಪ್ಪು ಕೆಂಪುಗುಡ್ಡೆ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
24/05/2022 10:49 am