ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಭಕ್ತಿಭಾವದ ಭಜನಾ ಮಂಗಲೋತ್ಸವ

ಮುಲ್ಕಿ ಮುಲ್ಕಿ ಸಮೀಪದ ಕೆ ಎಸ್ ರಾವ್ ನಗರ ಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ (ರಿ) ದಲ್ಲಿ ನೂತನ ಗುರುಮೂರ್ತಿ ಪ್ರತಿಷ್ಠೆ ಹಾಗೂ ಕಲಶಾಭಿಷೇಕ, ನೂತನ ಗುರುಮಂದಿರ ಉದ್ಘಾಟನೆ ಹಾಗೂ ಭಜನಾ ಮಂಗಲೋತ್ಸವ ಶ್ರೀ ವಿಖ್ಯಾತಾನಂದ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಮೂಡಬಿದ್ರೆ ಶಿವಾನಂದ ಶಾಂತಿಯವರ ಪೌರೋಹಿತ್ಯದಲ್ಲಿ ಪಡುಬಿದ್ರೆ ಚಂದ್ರಶೇಖರ ಶಾಂತಿಯವರ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆಯಿತು.

ಭಜನಾ ಮಂಗಲೋತ್ಸವ ದ ಪ್ರಯುಕ್ತ ಪ್ರಾತಃಕಾಲ ಶ್ರೀ ನಾರಾಯಣ ಗುರು ಸೇವಾ ಸಂಘದ ಅಧ್ಯಕ್ಷ ರಾಘವ ಎ ಸುವರ್ಣ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ನಡೆದು ಎನ್. ವನಜಾಕ್ಷಿ ವಾಸು ಪೂಜಾರಿ ಹಾಗೂ ಇಂಜಿನಿಯರ್ ವರುಣ್ ದೀಪ ಪ್ರಜ್ವಲನೆ ಮೂಲಕ ಭಜನಾ ಜ್ಯೋತಿಗೆ ಚಾಲನೆ ನೀಡಿದರು.

ಈ ಸಂದರ್ಭ ಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘದ ಸರ್ವ ಸದಸ್ಯರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ಬಳಿಕ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ನಡೆಯಿತು.

Edited By : PublicNext Desk
Kshetra Samachara

Kshetra Samachara

21/05/2022 07:36 am

Cinque Terre

2.06 K

Cinque Terre

0

ಸಂಬಂಧಿತ ಸುದ್ದಿ