ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತೋಕೂರು: ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಜೀರ್ಣೋದ್ಧಾರದ ಪ್ರಯುಕ್ತ ಅಷ್ಟೇಷ್ಟಿಕಾ ಸಹಿತ ಗರ್ಭಪಾತ್ರನ್ಯಾಸ

ಮುಲ್ಕಿ: ಹಳೆಯಂಗಡಿ ಸಮೀಪದ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜೀರ್ಣೋದ್ಧಾರದ ಪ್ರಯುಕ್ತ ಸಂಜೆ ಗಂಟೆ 6.58ಕ್ಕೆ ಒದಗುವ ವೃಶ್ಚಿಕ ಲಗ್ನದಲ್ಲಿ ಅಷ್ಟೇಷ್ಟಿಕಾ ಸಹಿತ ಗರ್ಭಪಾತ್ರನ್ಯಾಸವು ವೇದಮೂರ್ತಿ ಪಂಜ ಭಾಸ್ಕರ ಭಟ್ ಮಾರ್ಗದರ್ಶನದಲ್ಲಿ, ಕ್ಷೇತ್ರದ ತಂತ್ರಿಗಳಾದ ವೇ.ಮೂ. ಶಿಬರೂರು ಗೋಪಾಲಕೃಷ್ಣ ತಂತ್ರಿ ಹಾಗೂ ಮಧುಸೂದನ ತಂತ್ರಿಯವರ ನೇತೃತ್ವದಲ್ಲಿ ನಡೆಯಿತು.

ಈ ಸಂದರ್ಭ ದೇವಸ್ಥಾನದ ಅರ್ಚಕ ಮಧುಸೂದನ ಆಚಾರ್ಯ, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ಉಪಾಧ್ಯಕ್ಷ ಮೋಹನ್ ದಾಸ್,ಸದಸ್ಯ ಗುರುರಾಜ ಎಸ್ ಪೂಜಾರಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಹರಿದಾಸ್ ಭಟ್, ಸದಸ್ಯರಾದ ವಿಜಯಕುಮಾರ್ ರೈ, ಎಲ್.ಕೆ ಸಾಲ್ಯಾನ್, ಪುರುಷೋತ್ತಮ ರಾವ್, ವಿಜಯಕುಮಾರ್ ರೈ, ಯೋಗೀಶ್ ಕೋಟ್ಯಾನ್, ವಿಪುಲ ಡಿ ಶೆಟ್ಟಿಗಾರ್, ಶಾರದಾ ಬಂಗೇರ, ವಿಶ್ವನಾಥ್,ಸಮಿತಿಯ ಸುಗಂಧಿ ದಿನೇಶ್ ಕೊಂಡಾಣ, ಕಾಂತಣ್ಣ ಗುರಿಕಾರ್, ಉಮನಾಥ್ ಶೆಟ್ಟಿಗಾರ್, ವ್ಯಾಸರಾವ್ ಚೆನ್ನೈ, ಸುಬ್ರಹ್ಮಣ್ಯ ರಾವ್,ಊರ ಪರವೂರ ಭಕ್ತಾದಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

20/05/2022 08:01 pm

Cinque Terre

2.12 K

Cinque Terre

0

ಸಂಬಂಧಿತ ಸುದ್ದಿ