ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟೀಲು: ತಾನು ಕಲಿತ ಶಾಲೆಗೆ 25 ಲಕ್ಷ ವೆಚ್ಚದಲ್ಲಿ ನೂತನ ವಿಜ್ಞಾನವನ ಕೊಡುಗೆ ನೀಡಿದ ಹಳೆ ವಿದ್ಯಾರ್ಥಿ !!

ಕಟೀಲು:ದೈನಂದಿನ ವಸ್ತುಗಳಿಂದ ವಿಜ್ಞಾನದ ಕಲಿಕೆ ಬೇರೆ ಬೇರೆ ವಿಧದ ಚಕ್ರಗಳನ್ನು ಜೋಡಿಸಿಕೊಂಡು ಶಕ್ತಿಯನ್ನು ಹೇಗೆ ವರ್ಗಾಯಿಸಬಹುದು, ರಾಟೆ, ಸನ್ನೆ, ಹಗ್ಗದಿಂದ ಅನೇಕ ಪ್ರಯೋಗಗಳನ್ನು ಮಾಡುತ್ತ ವಿಜ್ಞಾನದ ಕಲಿಕೆ, ಸೋಲಾರ್  ಎನರ್ಜಿ, ಲೋಹಗಳ ಶಬ್ದದ ಉತ್ಪತ್ತಿ, ಜಲಾಂತರ್ಗಾಮಿಯಲ್ಲಿ ಸ್ಕೋಪ್, ಶಕ್ತಿ ನಿಯಮದ ಬಗ್ಗೆ ಸ್ವಯಂ ವಿದ್ಯಾರ್ಥಿಗಳೇ ದೈನಂದಿನ ಜೀವನಕ್ಕೆ ಸಂಬಂಧಿಸಿದ ವಸ್ತುಗಳಿಂದ ಪ್ರಯೋಗಗಳನ್ನು ಮಾಡುತ್ತ ವಿಜ್ಞಾನವನ್ನು ಕಲಿಯುವ ವಿಶಿಷ್ಟ ಸೈನ್ಸ್ ಪಾರ್ಕ್ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಪ್ರೌಢಶಾಲೆ ಹಾಗೂ ಪದವೀಪೂರ್ವ ಕಾಲೇಜಿನ ಆವರಣದಲ್ಲಿ ನಿರ್ಮಾಣವಾಗಿದೆ.

ಇಂತಹದ್ದೊಂದು ವಿಜ್ಞಾನ ವನವನ್ನು ತಾನು ಕಲಿತ ಶಿಕ್ಷಣ ಸಂಸ್ಥೆಗೆ ಕೊಡುಗೆಯಾಗಿ ನೀಡಿ ಇತರ ಹಳೆ ವಿದ್ಯಾರ್ಥಿಗಳಿಗೂ ಮಾದರಿಯಾಗಿರುವವರು ಕ್ಯಾಪ್ಸ್ ಫೌಂಡೇಷನ್ ಇದರ ಸ್ಥಾಪಕ ಅಧ್ಯಕ್ಷ ಸಿಎ ಚಂದ್ರಶೇಖರ ಶೆಟ್ಟಿ, ಕಟೀಲು ಪದವೀಪೂರ್ವ ಕಾಲೇಜು ಹಾಗೂ ಪದವಿಕಾಲೇಜುಗಳಲ್ಲಿ ಕಲಿತವರು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಡೊನೇಷನ್ ರಹಿತ ಶಿಕ್ಷಣ ನೀಡುತ್ತಿರುವ ಕಟೀಲು ವಿದ್ಯಾಲಯಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ರೂಪಾಯಿ 25 ಲಕ್ಷ ವೆಚ್ಚದಲ್ಲಿ ಸಯನ್ಸ್ ಪಾರ್ಕ್ ನಿರ್ಮಿಸಿ ಕೊಟ್ಟಿದ್ದಾರೆ.

ತಾನು ಕಲಿತ ಶಾಲೆಗಷ್ಟೇ ಅಲ್ಲದೆ ತಮ್ಮ ಸಂಸ್ಥೆಯಿಂದ ಕೋಟ, ರಾಮಕುಂಜ ಶಾಲೆಗಳಲ್ಲಿ ಹೀಗೆ ಮೂರು ಕಡೆಗಳಲ್ಲಿ ವಿಜ್ಞಾನವನ ನಿರ್ಮಿಸಿ ನೀಡುತ್ತಿರುವ ಕ್ಯಾಪ್ಸ್ ಫೌಂಡೇಷನ್ ಇದಕ್ಕಾಗಿ 25ಲಕ್ಷ ರೂಪಾಯಿ ಖರ್ಚು ಮಾಡುತ್ತಿದೆ.

ಭಾರತದ 75ನೇ ವರ್ಷದ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಮೂರು ಶಿಕ್ಷಣ ಸಂಸ್ಥೆಗಳಿಗೆ ವಿಜ್ಞಾನವನ ನಿರ್ಮಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕದ ಸೇಡಂ ಸೇರಿದಂತೆ ಇತರ ಜಿಲ್ಲೆಗಳ ಶಾಲೆಗಳಲ್ಲೂ ಮಾಡುವ ಯೋಚನೆ ಇದೆ ಎನ್ನುತ್ತಾರೆ ಪೌಂಡೇಷನ್ ಸ್ಥಾಪಕ ಅಧ್ಯಕ್ಷ ಸಿ.ಎ.ಚಂದ್ರಶೇಖರ ಶೆಟ್ಟಿ. ನರ್ಸರಿಯಿಂದ ಸಂಸ್ಕೃತ ಸ್ನಾತಕೋತ್ತರ ಅಧ್ಯಯನ ಕೇಂದ್ರದವರೆಗೆ ಡೊನೇಷನ್ ರಹಿತ ಶಿಕ್ಷಣ ನೀಡುತ್ತಿರುವ ಕಟೀಲು ದೇಗುಲದ ಆರು ಶಿಕ್ಷಣ ಸಂಸ್ಥೆಗಳಲ್ಲಿ ಎರಡೂವರೆ ಸಾವಿರದಷ್ಟು ವಿದ್ಯಾರ್ಥಿಗಳಿದ್ದಾರೆ. ಇಲ್ಲಿರುವ ಅಟಲ್ ಥಿಂಕರಿಂಗ್ ಲ್ಯಾಬ್ ಮೂಲಕ ತಾಂತ್ರಿಕ ಪ್ರಯೋಗಗಳಲ್ಲಿ ಆಸಕ್ತ ಅನೇಕ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲಾಗುತ್ತಿದೆ. ಇದೀಗ ಸಯನ್ಸ್ ಪಾರ್ಕ್ ಮತ್ತಷ್ಟು ಕಲಿಕೆಗೆ ಪ್ರೇರಣೆ ಸಿಗುವಂತಾಗಿದೆ.

ಸಯನ್ಸ್ ಪಾರ್ಕ್‌ನಲ್ಲೇನಿದೆ?

ರಾಟೆ ವ್ಯವಸ್ಥೆ, ದ್ರವ್ಯ ಶಾರಿ ಮತ್ತು ಜಡತ್ವ, ಘರ್ಷಣೆ, ಓರೆಯಾದ ತಳ, ನಿಮ್ಮನ್ನು ನೀವೇ ಎತ್ತಿ, ಒಂದನೇ, ಎರಡನೇ ಮೂರನೇ ಸನ್ನೆಗಳು, ಬಣ್ಣಗಳ ತಾಪ ಹೀರುವಿಕೆ(ಪ್ರ್ಲಾಂಕನ ನಿಯಮ), ಎತ್ತುವ ತಿರುಪು ಮೊಳೆ ಮತ್ತು ಚಕ್ರ, ಸರಪಳಿ ಪಟ್ಟಿ ಮತ್ತು ಹಲ್ಲುಗಾಲಿಯ ಸರಣಿ, ಎತ್ತರ ಮತ್ತು ದ್ರವ ಭಾರ, ಸ್ವಯಂಚಾಲಿತ ವಾಹನದ  ಮಾದರಿ, ಶಕ್ತಿಯ ಸರ್ಕಸ್, ಪ್ರತಿಧ್ವನಿಸುವ ಘನಾಕೃತಿ, ಗೈರೋಸ್ಕೋಪ್, ಸೈಕಲ್ ಚಕ್ರ, ಕೋನೀಯ ಚಲನೆಯ ಪರಿಮಾಣ, ನ್ಯೂಟನ್ನನ ಮೂರನೇ ನಿಯಮ, ದೂರದರ್ಶಕ, ಸೂರ‍್ಯನ ನೆರಳಿನ ಗಡಿಯಾರ, ಸೌರಜಲ ಮಾಪಕ, ಸಂಗೀತದ ಕೊಳವೆಗಳು ಮತ್ತು ಗಂಟೆ ಗೋಪುರ, ಸಿಂಪಥೆಟಿಕ್ ಸ್ಪ್ರಿಂಗ್, ಅಳತೆ ಬದಲಾಗುವ ಲೋಲಕ, ಆವರ್ತನ ಕೋಷ್ಟಕ, ಹಲ್ಲು ಗಾಲಗಳ ಬಗೆಗಳು ಇದೆ.

Edited By : PublicNext Desk
Kshetra Samachara

Kshetra Samachara

17/05/2022 09:59 pm

Cinque Terre

1.78 K

Cinque Terre

0

ಸಂಬಂಧಿತ ಸುದ್ದಿ