ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿನ್ನಿಗೋಳಿ:ತುಳು ನಾಟಕೋತ್ಸವದ ಸಮಾರೋಪ; ಸಾಧಕರಿಗೆ ಗೌರವ

ಮುಲ್ಕಿ:ಕಿನ್ನಿಗೋಳಿಯ ವಿಜಯ ಕಲಾವಿದರು ಮತ್ತು ಯುಗಪುರುಷದ ನೇತೃತ್ವದಲ್ಲಿ ವಿಜಯ ಕಲಾವಿದರ ರಜತಾ ವರ್ಷಾಚರಣೆಯ ತುಳು ನಾಟಕೋತ್ಸವದ ಸಮಾರೋಪ ಸಮಾರಂಭ ಕಿನ್ನಿಗೋಳಿಯ ಬಸ್ ನಿಲ್ದಾಣದ ಬಯಲು ರಂಗವೇದಿಕೆಯಲ್ಲಿ ನಡೆಯಿತು.

ಉದ್ಯಮಿ ಕರುಣಾಕರ ಶೆಟ್ಟಿ ಮಧ್ಯಗುತ್ತು ದೀಪ ಬೆಳಗಿಸಿ ಉದ್ಘಾಟಿಸಿದರು.

ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಶಾಸಕ ಉಮಾನಾಥ ಕೋಟ್ಯಾನ್ ರಜತ ವಿಜಯ ಸ್ಮರಣೆ ಸಂಚಿಕೆ ಬಿಡುಗಡೆಗೊಳಿಸಿದರು ಸಾಧಕರನ್ನು ಮಾಜಿ ಸಚಿವರಾದ ಕೆ ಅಭಯಚಂದ್ರ ಜೈನ್ ಸಮಾಜ ಸೇವಕರನ್ನು ಉದ್ಯಮಿ ವಿರಾರ್ ಶಂಕರ್ ಶೆಟ್ಟಿ ಗೌರವಿಸಿದರು.

ಉದ್ಯಮಿ ಮುನಿಯಾಲು ಉದಯ ಶೆಟ್ಟಿ ವಿದ್ಯಾರ್ಥಿ ವೇತನ ಪ್ರಧಾನ ಮಾಡಿದರು ಮುಲ್ಕಿ ಬಂಟರ ಸಂಘದ ಗೌರವಾಧ್ಯಕ್ಷ ಸಂತೋಷ್ ಕುಮಾರ್ ಹೆಗ್ಡೆ ತಂಡದ ಕಲಾವಿದರನ್ನು ಗೌರವಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ವಿಜಯ ಕಲಾವಿದರ ಸಂಘದ ಗೌರವಾಧ್ಯಕ್ಷ ಭುವನಾಭಿರಾಮ ಉಡುಪ,ಕಾಂಗ್ರೆಸ್ ನಾಯಕ ಮಿಥುನ್ ರೈ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷರಾದ ಕರ್ನಿರೆ ವಿಶ್ವನಾಥ ಶೆಟ್ಟಿ, ಸುಚರಿತ ಶೆಟ್ಟಿ,ಲವ ಶೆಟ್ಟಿ, ಪುರುಷೋತ್ತಮ ಶೆಟ್ಟಿ,ಮುಂಡ್ಕೂರು ರತ್ನಾಕರ ಶೆಟ್ಟಿ, ಅನಿಲ್ ಶೆಟ್ಟಿ, ಸುರೇಶ್ ಪದ್ಮನೂರು, ನವೀನ್ ಶೆಟ್ಟಿ ಮುಲ್ಕಿ, ರಘುನಾಥ್ ಕಾಮತ್ ಕೆಂಚನಕೆರೆ, ಜಗದೀಶ್ ಶೆಟ್ಟಿ ಕೆಂಚನಕೆರೆ, ದುರ್ಗಾಪ್ರಸಾದ್ ಹೆಗ್ಡೆ,ಲಕ್ಮಣ್ ಬಿ.ಬಿ ಏಳಿಂಜೆ, ಸಾಯಿನಾಥ್ ಶೆಟ್ಟಿ, ಸ್ವರಾಜ್ ಶೆಟ್ಟಿ, ಕಿನ್ನಿಗೋಳಿ ವಿಜಯ ಕಲಾವಿದರು ತಂಡದ ಅಧ್ಯಕ್ಷ ಶರತ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

16/05/2022 07:18 am

Cinque Terre

1.37 K

Cinque Terre

0

ಸಂಬಂಧಿತ ಸುದ್ದಿ