ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟೀಲು: ಸಂಗೀತ ಶಿಬಿರ ಉದ್ಘಾಟನೆ

ಕಟೀಲು : ಸಂಗೀತ ದೇವರನ್ನು ಸಂತುಷ್ಟಗೊಳಿಸಲು ಮತ್ತು ಸ್ವಯಂ ಆನಂದಿಸಲು ಹಾಗೂ ಸರ್ವರನ್ನೂ ಖುಷಿಪಡಿಸಲು ಇರುವ ಅಪೂರ್ವ ಕಲೆ. ಸಾಧನೆಯ ಮೂಲಕ ಸಿದ್ಧಿಸಿಕೊಳ್ಳಬಹುದಾದ ಸಂಗೀತದಂತಹ ಕಲೆಗಳಿಂದ ಕಲಾದೇವತೆಯಾದ ದುರ್ಗೆಯ ಆರಾಧನೆಗೆ ಕಟೀಲಿನಲ್ಲಿ ಸಾಕಷ್ಟು ಅವಕಾಶಗಳನ್ನು ನೀಡಲಾಗುತ್ತಿದೆ. ಸಂಗೀತ ಕಾರ್ಯಾಗಾರಗಳ ಮೂಲಕ ಆಸಕ್ತರಿಗೆ ಕಲಿಕೆಗೆ ಪ್ರೇರಣೆ ನೀಡುವುದಕ್ಕೆ ದೇವಸ್ಥಾನ ಸದಾ ಮುಂದಿರುತ್ತದೆ ಎಂದು ಕಟೀಲು ದೇಗುಲದ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಹೇಳಿದರು.

ಅವರು ಕಟೀಲು ಅಕ್ಷರಾನ್ನಂ ಸಭಾಂಗಣದಲ್ಲಿ ಕಟೀಲು ದೇಗುಲ, ಪ್ರಾಥಮಿಕ ಶಾಲೆ ಹಾಗೂ ಬಜಪೆಯ ಶಾಂತಿ ಕಲಾ ಕೇಂದ್ರದ ಸಹಯೋಗದಲ್ಲಿ ನಡೆಯುವ ಎರಡು ದಿನಗಲ ಕರ್ನಾಟಕ ಶಾಸ್ತ್ರೀಯ ಸಂಗೀತ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಖ್ಯಾತ ಸಂಗೀತಗಾರ್ತಿ ಪುತ್ತೂರಿನ ವಿದುಷಿ ಸುಚಿತ್ರಾ ಹೊಳ್ಳ ಶಿಬಿರ ನಡೆಸಿಕೊಟ್ಟರು.

ಶಾಂತಿ ಕಲಾ ಕೇಂದ್ರದ ಚಂದ್ರಲಾ ಆಚಾರ್ಯ, ಶಾಲಾ ಮುಖ್ಯ ಶಿಕ್ಷಕರಾದ ಸರೋಜಿನಿ, ಚಂದ್ರಶೇಖರ ಭಟ್ ವೇದಿಕೆಯಲ್ಲಿದ್ದರು.ಜ್ಯೋತಿ ಉಡುಪ ಸ್ವಾಗತಿಸಿದರು. ಆಶಿಕಾ ನಿರೂಪಿಸಿದರು.

Edited By : PublicNext Desk
Kshetra Samachara

Kshetra Samachara

14/05/2022 08:15 pm

Cinque Terre

1.81 K

Cinque Terre

0

ಸಂಬಂಧಿತ ಸುದ್ದಿ