ಮುಲ್ಕಿ: ಪುನರೂರು ವಿಪ್ರ ಸಂಪದದ ಪುನರೂರು,ತೋಕೂರು, ಕೆರೆಕಾಡು ವಲಯದ ವಾರ್ಷಿಕ ಮಹಾಸಭೆ 2000 21 22 ಪುನರೂರು ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಪುನರೂರು ವಿಪ್ರ ಸಂಪದದ ಅಧ್ಯಕ್ಷ ಸುಧಾಕರ ರಾವ್ ವಹಿಸಿದ್ದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಧರ್ಮದರ್ಶಿ ಡಾಕ್ಟರ್ ಹರಿಕೃಷ್ಣ ಪುನರೂರು ಮಾತನಾಡಿ ವಿಪ್ರ ಬಾಂಧವರು ಸಂಘಟನೆ ಬಲಪಡಿಸಿ ಸಾಮಾಜಿಕ ಚಟುವಟಿಕೆ ಮೂಲಕ ದೇಶಕ್ಕೆ ಮಾದರಿಯಾಗಿ ಎಂದು ಶುಭ ಹಾರೈಸಿದರು.
ಸಭೆಯಲ್ಲಿ ಧಾರ್ಮಿಕ ಪರಿಷತ್ ಸದಸ್ಯ ಭುವನಾಭಿರಾಮ ಉಡುಪ, ಪಟೇಲ್ ದೇವಸ್ಥಾನದ ಆಡಳಿತ ಮೊಕ್ತೇಸರ ಪಟೇಲ್ ವಾಸುದೇವರಾವ್, ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಹರಿದಾಸ್ ಭಟ್, ಸ್ಥಾಪಕ ಅಧ್ಯಕ್ಷ ಸುರೇಶ್ ರಾವ್ ನೀರಳಿಕೆ, ರಾಘವೇಂದ್ರರಾವ್ ಕೆರೆಕಾಡು, ಅವಿನಾಶ್ ರಾವ್, ಪಟೇಲ್ ವಿಶ್ವನಾಥ ರಾವ್, ಗೋಪಿನಾಥ್ ರಾವ್, ಯುವ ವೇದಿಕೆ ಅಧ್ಯಕ್ಷ ಶಶಾಂಕ್ ಮುಚ್ಚಿಂತಾಯ ಮತ್ತಿತರರು ಉಪಸ್ಥಿತರಿದ್ದರು .
ಆರೋಗ್ಯ ನಿಧಿಯಿಂದ ಸಹಾಯ ಹಸ್ತ ನೀಡಲಾಯಿತು. ಎಸ್ ಎಸ್ ಎಲ್ ಸಿ,ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದವರನ್ನು ಗೌರವಿಸಲಾಯಿತು.ಉಪಾಧ್ಯಕ್ಷ ರಾಘವೇಂದ್ರ ರಾವ್ ಧನ್ಯವಾದ ಅರ್ಪಿಸಿದರು, ಮಾಜೀ ಅಧ್ಯಕ್ಷ ಜನಕರಾಜ್ ರಾವ್ ನಿರೂಪಿಸಿದರು.
Kshetra Samachara
13/05/2022 09:00 pm