ಮುಲ್ಕಿ: ಅಧ್ಯಯನ ಅನುಭವ ಜೀವನ ಪಾಠವನ್ನು ಕಲಿಸುತ್ತದೆ. ಎನ್‌ಎಸ್‌ಎಸ್ ಶಿಬಿರಗಳೂ ಇದಕ್ಕೆ ಪೂರಕವಾಗಿವೆ ಎಂದು ಮುಲ್ಕಿ ಅರಮನೆ ದುಗ್ಗಣ್ಣ ಸಾವಂತರು ಹೇಳಿದರು.
ಅವರು ಹಳೆಯಂಗಡಿ ನಾರಾಯಣ ಸನಿಲ್ ಸರ್ಕಾರಿ ಪದವೀಪೂರ್ವ ಕಾಲೇಜಿನಲ್ಲಿ ಮಂಗಳೂರು ರಥಬೀದಿ ಡಾ. ಪಿ. ದಯಾನಂದ ಪೈ - ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಎನ್‌ಎಸ್‌ಎಸ್ ಶಿಬಿರಾಧಿಕಾರಿ ಡಾ. ಶೇಷಪ್ಪ ಕೆ. ಮಾತನಾಡಿ ಮೂರು ಘಟಕಗಳ ಸುಮಾರು ನೂರು ಶಿಬಿರಾರ್ಥಿಗಳಿದ್ದು, ವಿಜ್ಞಾನ ಮತ್ತು ವೈಜ್ಞಾನಿಕ ಮನೋಧರ್ಮಕ್ಕಾಗಿ ಯುವಜನತೆ ಘೋಷಣೆಯೊಂದಿಗೆ ನಡೆಯಲಿರುವ ಶಿಬಿರದಲ್ಲಿ ಹಳೆಯಂಗಡಿ ಪರಿಸರದ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಕಾರ್ಯ, ರಂಗತರಬೇತಿ, ಹೈನುಗಾರಿಕೆ ಮತ್ತು ಉತ್ಪನ್ನಗಳ ಮಾಹಿತಿ, ಸಸಿಹಿತ್ಲು ಕಡಲತೀರ ಸ್ವಚ್ಛತಾ ಕಾರ‍್ಯ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಕಾಲೇಜಿನ ಪ್ರಾಚಾರ್ಯ ಪ್ರೊ. ರಾಜಶೇಖರ ಹೆಬ್ಬಾರ್, ಕಾಲೇಜು ಅಭಿವೃದ್ಧಿ ಸಮಿತಿಯ ಮೋಹನದಾಸ ಸುವರ್ಣ, ಪ್ರತಿಜ್ಞಾವಿಧಿ ಬೋಧಿಸಿದರು. ಹಳೆಯಂಗಡಿ ಗ್ರಾ. ಪಂ. ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ, ಪಿಡಿಒ ಮುತ್ತಪ್ಪ ಡವಲಗಿ, ಹಳೆಯಂಗಡಿ ಕಾಲೇಜಿನ ಪ್ರಾಚಾರ‍್ಯೆ ಜಯಶ್ರೀ, ಶಿಬಿರಾಧಿಕಾರಿ ಪ್ರೊ. ಅರುಣಾ ಕುಮಾರಿ, ಪ್ರೊ. ತ್ರಿಶಾಂತ್ ಕುಮಾರ್ ಮತ್ತಿತರರಿದ್ದರು.
Kshetra Samachara
10/05/2022 05:19 am