ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ:ಡಾ.ಹರಿಕೃಷ್ಣ ಪುನರೂರು ಅವರು ನಿಜವಾದ ‘ಧರ್ಮದರ್ಶಿ’: ಶ್ರೀಶ್ರೀ ಚಂದ್ರಶೇಖರ ಸ್ವಾಮೀಜಿ

ಮುಲ್ಕಿ: ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ಕೇವಲ ಧಾರ್ಮಿಕ ಲೋಕದ ಧರ್ಮದರ್ಶಿಯಾಗದೆ ಸಾಹಿತ್ಯ, ಕ್ರೀಡೆ, ಸಮಾಜ ಸೇವೆ, ಸಂಸ್ಕೃತಿ, ಸಾಂಸ್ಕೃತಿಕ ಲೋಕ ಹೀಗೆ ಆಯಾ ಕ್ಷೇತ್ರದ ಧರ್ಮವನ್ನು ಅರಿತು ಪಾಲಿಸಿಕೊಂಡು ಬಂದ ನಿಜವಾದ ಧರ್ಮದರ್ಶಿ', ಮಂಗಳೂರು ವಿವಿಯು ಗೌರವ ಡಾಕ್ಟರೇಟ್ ನೀಡುವ ಮೂಲಕ ಸಮಾಜಕ್ಕೆ ಅವರು ನೀಡಿದ ಕೊಡುಗೆಯನ್ನು ಗೌರವಿಸಿದೆ ಎಂದು ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಹೇಳಿದರು.

ಅವರು ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದ ಡಾ. ಹರಿಕೃಷ್ಣ ಪುನರೂರು ಅವರನ್ನು ಶ್ರೀಶ್ರೀ ಚಂದ್ರಶೇಖರ ಆಶ್ರಮದ ವತಿಯಿಂದ ಗೌರವಿಸಿ ಮಾತನಾಡಿದರು.

ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ಸಾಹಿತ್ಯ, ಕ್ರೀಡೆ, ಸಮಾಜ ಸೇವೆ, ಸಾಂಸ್ಕೃತಿಕ ಸೇವೆಗಾಗಿ ಕೇಂದ್ರ ಸರಕಾರವು ನೀಡುವ ಪದ್ಧಪುರಸ್ಕಾರ ಪಡೆಯಲು ಅರ್ಹರಾಗಿದ್ದಾರೆ. ಮುಂದಿನ ದಿನಗಳಲ್ಲಿ ಸರಕಾರವು ಇವರ ಸೇವೆಯನ್ನು ಪರಿಗಣಿಸಿ, ಗುರುತಿಸುವ ಕೆಲಸ ಮಾಡಬೇಕುಎಂದರು.ಉದ್ಯಮದಿಂದ ಬಂದ ಲಾಭದಿಂದ ನೂರಾರು ವಸತಿ ನಿರ್ಮಾಣ ಮಾಡಿ ಬಡವರಿಗೆ ಆಶ್ರಯ ನೀಡಿದ ಆಶ್ರಯದಾತರಾದ ಪುನರೂರು ರವರು, ಸಾಹಿತ್ಯ, ಸಾಂಸ್ಕೃತಿಕ ಲೋಕದ ಪೋಷಕರಾಗಿ ಸೇವೆ ಮಾಡಿದ್ದಾರೆ ಎಂದರು.

ಈ ಸಂದರ್ಭ ಉಷಾ ಹರಿಕೃಷ್ಣ ಪುನರೂರು, ಪುನರೂರು ದೇವಸ್ಥಾನದ ಆಡಳಿತ ಮೊಕ್ತೇಸರ ಪಟೇಲ್ ವಾಸುದೇವರಾವ್, ಧಾರ್ಮಿಕ ಪರಿಷತ್ ಸದಸ್ಯ ಭುವನಾಭಿರಾಮ ಉಡುಪ, ಉದ್ಯಮಿ ರಾಮಮೂರ್ತಿರಾವ್,ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದ ನಿರ್ದೇಶಕಿ ರಜನಿ ಸಿ ಭಟ್, ರಾಹುಲ್ ಸಿ ಭಟ್, ಸಂಚಾಲಕ ಪುನೀತ್ ಕೃಷ್ಣ, ಪುನರೂರು ವಿಪ್ರ ಸಂಪದದ ಅಧ್ಯಕ್ಷ ಸುಧಾಕರ್ ರಾವ್ , ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು, ಸುರೇಶ್ ರಾವ್ ನೀರಳಿಕೆ ರಾಘವೇಂದ್ರರಾವ್ ಕೆರೆಕಾಡು, ಪುರಂದರ ಶೆಟ್ಟಿಗಾರ್, ಪಟೇಲ್ ವಿಶ್ವನಾಥ ರಾವ್, ಗೋಪಿನಾಥ್ ರಾವ್, ದೇವಸ್ಥಾನದ ಅರ್ಚಕ ಶಶಾಂಕ್ ಮುಚ್ಚಿಂತಾಯ, ಧನಂಜಯ ಶೆಟ್ಟಿಗಾರ್, ಮತ್ತಿತರರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

02/05/2022 11:24 am

Cinque Terre

1.29 K

Cinque Terre

0

ಸಂಬಂಧಿತ ಸುದ್ದಿ